ಮಂಗಳೂರು: 48 ವರ್ಷ ಇತಿಹಾಸವುಳ್ಳ ವಸಂತ ಶೆಟ್ಟಿ ಅವರ ಅಧ್ಯಕ್ಷತೆಯ ಜಪ್ಪು ಬಂಟರ ಸಂಘದ ಮಹಾಸಭೆ ಏಪ್ರಿಲ್ 20ರಂದು ರಮಾ ಲಕ್ಷ್ಮಿನಾರಾಯಣ ಕನ್ವರ್ಷನ್ ಹಾಲ್ ಎಮ್ಮೆಕೆರೆಯಲ್ಲಿ ನಡೆಯಿತು .ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ, ಸಾಹಿತಿ, ಸಂಘಟಕಿ,ಡಾ. ಮಾಲತಿ ಶೆಟ್ಟಿ ಮಾಣೂರು ಅವರಿಗೆ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಸಂತ ಶೆಟ್ಟಿ ವಹಿಸಿದರು. ಮುಖ್ಯ ಅತಿಥಿಗಳಾಗಿ ಶಬರಿಕ್ಯಾಟ್ರಿಕ್ ಮಾಲಕರಾದ ರಾಜೇಶ್ ಶೆಟ್ಟಿ, ಮಂಜರಿ ಫುಡ್ಸ್ ಮಾಲಕರಾದ ರಮೇಶ್ ಶೆಟ್ಟಿ, ಸತೀಶ್ ಶೆಟ್ಟಿ ಅಡಪ , ಕಾರ್ಯದರ್ಶಿ ರಾಜ ಶೆಟ್ಟಿ ,ಖಜಾಂಚಿ ಜೀವನ ಶೆಟ್ಟಿ ಉಪಾಧ್ಯಕ್ಷರಾದ ರಾಜಕುಮಾರ ಶೆಟ್ಟಿ ,ರೇಖಾ ಆರ್ ನಾಯರ್, ಸಾಂಸ್ಕೃತಿಕ ಕಾರ್ಯದರ್ಶಿ ವಿದ್ಯಾ ರೈ ಸುಜಾತಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.