ಶಿವಬಾಗ್‌ನಲ್ಲಿ ರೋಹನ್ ಗಾರ್ಡನ್ ಅಪಾರ್ಟ್‌ಮೆಂಟ್‌ಗೆ ಭೂಮಿಪೂಜೆ

ಮಂಗಳೂರು: ರೋಹನ್ ಕಾರ್ಪೋರೇಶನ್‌ನ ಮತ್ತೊಂದು ವಸತಿ ಸಮುಚ್ಚಯ ರೋಹನ್ ಗಾರ್ಡನ್ ಯೋಜನೆಗೆ ನಗರದ ಕದ್ರಿ ಶಿವಬಾಗ್ 2ನೇ ಕ್ರಾಸ್‌ನಲ್ಲಿ ಶನಿವಾರ ಭೂಮಿಪೂಜೆ ನಡೆಯಿತು.

ಬೆಂದೂರ್ ಸೈಂಟ್ ಸೆಬಾಸ್ಟಿಯನ್ ಚರ್ಚ್ ನ ಧರ್ಮಗುರುಗಳಾದ ಫಾದರ್ ವಾಲ್ಟರ್ ಡಿಸೋಜ ಭೂಮಿ ಪೂಜೆ ನೆರವೇರಿಸಿ, ದೇವರ ಮೇಲೆ ಅಚಲ ವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಮಹತ್ಸಾಧನೆ ಮಾಡಿ ಸಮಾಜ ಸೇವೆ ಮಾಡುವ ಕನಸಿಗೆ ರೋಹನ್ ಮೊಂತೇರೊ ನಿದರ್ಶನ. ಅವರ ಎಲ್ಲ ಕನಸುಗಳೂ ನನಸಾಗಲಿ ಎಂದು ಆಶೀರ್ವಚನ ನೀಡಿದರು.


ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ರೊಹನ್ ಮೊಂತೇರೊ ಜನರ ಅಪೇಕ್ಷೆಗೆ ಪೂರಕ ಗುಣಮಟ್ಟದ ಕಟ್ಟಡಗಳನ್ನು ನಿರ್ಮಿಸಿ, ಗ್ರಾಹಕರು ಸಂತೃಪ್ತರಾಗಿದ್ದರಿಂದ 15 ದಿನದಲ್ಲಿ ಮೂರನೇ ಯೋಜನೆಗೆ ಶಿಲಾನ್ಯಾಸ ನಡೆದಿದೆ. ಶೀಘ್ರ 50ನೇ ಯೋಜನೆ ಪೂರೈಸಲಿ ಎಂದು ಹಾರೈಸಿದರು.
ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಕಿಯೊನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮಾಜಿ ಕಾರ್ಪೊರೇಟರ್ ನವೀನ್ ಡಿಸೋಜ, ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ ಬಾಲ್ಯೊಟ್ಟು, ದಾಯ್ಜಿವಲ್ಡ್ ನಿರ್ದೇಶಕ ವಾಲ್ಟರ್ ನಂದಳಿಕೆ, ಯುವ ಉದ್ಯಮಿ ಮೇಘರಾಜ್ ಜೈನ್ ಮುಖ್ಯ ಅತಿಥಿಗಳಾಗಿದ್ದರು.

ಹೆಚ್ಚಿನ ಮಾಹಿತಿ ಅಥವಾ ಬುಕಿಂಗ್‌ಗಾಗಿ, ರೋಹನ್ ಕಾರ್ಪೊರೇಶನ್ ದೂರವಾಣಿ ಸಂಖ್ಯೆ: 98454 90100, ಈಮೇಲ್: info@rohancorporation.in, ಜಾಲತಾಣ: www.rohancorporation.in ಅಥವಾ ರೋಹನ್ ಕಾರ್ಪೋರೇಶನ್, ರೋಹನ್ ಸಿಟಿ, ಬಿಜೈ, ಮಂಗಳೂರು 575004 ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

error: Content is protected !!