ಮೆಡಿಕವರ್ಡ್ ಫ್ಯಾಮಿಲಿ ಕಾರ್ಡ್ ಗೆ ಚಾಲನೆ‌ ನೀಡಿದ ಎಸಿಪಿ ರೀನಾ ಸುವರ್ಣ

ಬೆಂಗಳೂರು , ವೈಟ್‌ ಫಿಲ್ದ್‌ : ಮೆಡಿಕವರ್‌ ಆಸ್ಪತ್ರೆ ವತಿಯಿಂದ ಮೆಡಿಕವರ್ಡ್‌ ಅನ್ನೋ ಫ್ಯಾಮಿಲಿ ಕಾರ್ಡ್‌ ಅನ್ನು ಲಾಂಚ್‌ ಮಾಡಲಾಗಿದೆ . ವೈಟ್‌ ಫಿಲ್ದ್‌ ವಿಭಾಗದ ಎಸಿಪಿ ರೀನಾ ಸುವರ್ಣ ಅವರು ಮೆಡಿಕವರ್ಡ್‌ ಕಾರ್ಡ್‌ ಗೆ ಚಾಲನೆ ನೀಡಿದರು .

ಸಿಂಗಯ್ಯನ ಪಾಳ್ಯದಲ್ಲಿರುವ ಎಸಿಪಿ ಕಚೇರಿಯಲ್ಲಿ ಮೆಡಿಕವರ್ಡ್‌ ಫ್ಯಾಮಿಲಿ ಕಾರ್ಡ್‌ ಗೆ ಚಾಲನೆ ನೀಡಲಾಯ್ತು. ಮೆಡಿಕವರ್‌ ಆಸ್ಪತ್ರೆಯ ಮುಖ್ಯಸ್ಥ ನವೀನ್‌ ಎನ್‌ ಹಾಗೂ ಆಸ್ಪತ್ರೆಯ ಮಾರ್ಕೆಟಿಂಗ್‌ ವಿಭಾಗದ ಮುಖ್ಯಸ್ಥ ರೋಹಿತ್‌ ಶರ್ಮಾ ಭಾಗಿಯಾಗಿದ್ದರು .

ಮೆಡಿಕವರ್ಡ್‌ ಕಾರ್ಡ್‌ ನಿಂದ ಸಾಕಷ್ಟು ಉಪಯೋಗವಿದ್ದು, ಕಾರ್ಡ್‌ ಗೆ ೫೦೦ ರೂ ನೀಡಬೇಕಾಗಿದ್ದು ,ಒಂದು ವರ್ಷವ ವ್ಯಾರಂಟಿ ಇರಲಿದೆ. ಕಾರ್ಡ್‌ ರಿಜಿಸ್ಟ್ರರ್‌ ಮಾಡಿದವರ ವಿಳಾಸಕ್ಕೆ ಕಾರ್ಡ್‌ ಅನ್ನು ಕಳುಹಿಸಿಕೊಡಲಾಗುತ್ತದೆ.ಕಾರ್ಡ್‌ ನೊಂದಾಣಿ ಆದ ೧೦ ದಿನಗಳಲ್ಲಿ ಮನೆಗಳಿಗೆ ಕಾರ್ಡ್‌ ಅನ್ನು ತಲುಪಿಲಾಗುತ್ತದೆ. ಕಾರ್ಡ್‌ ನ ಬಳಕೆದಾರರಿಗೆ ಶೇಕಡಾ ೨೫ ರಿಂದ ೫೦ ರಷ್ಟು ರಿಯಾಯತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಹತ್ತು ಕಿಲೊ ಮೀಟರ್‌ ವ್ಯಾಪ್ತಿಯಲ್ಲಿ ಉಚಿತ ಅಂಬ್ಯುಲೆನ್ಸ್‌ ಸರ್ವಿಸ್‌ ಕೂಡ ನೀಡಲಾಗುತ್ತದೆ.

error: Content is protected !!