ಮಂಗಳೂರು: ಕಾಟಿಪಳ್ಳ ಮಳೆಹಾನಿ ಪ್ರದೇಶಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಭೇಟಿ ನೀಡಿ ಹಾನಿಗೀಡಾಗಿರುವ ಸುಮಾರು 30 ಮನೆಗಳಿಗೆ ತೆರಳಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಇದೇ ಸಂದರ್ಭದಲ್ಲಿ ತಮ್ಮ “IAM’ ಫೌಂಡೇಶನ್ ವತಿಯಿಂದ ಸಂತ್ರಸ್ತರಿಗೆ ಆರ್ಥಿಕ ಸಹಾಯಧನ ಹಸ್ತಾಂತರ ಮಾಡಿದರು.
ಮಳೆಹಾನಿಯಿಂದ ಸಂಪೂರ್ಣ ಜಖಂಗೊಂಡಿದ್ದ ಕಾರುಣ್ಯ ವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶಾಲೆಯ ಮುಖ್ಯಸ್ಥರ ಜೊತೆ ಚರ್ಚಿಸಿ ಸರಕಾರದಿಂದ ಹೆಚ್ಚಿನ ಪರಿಹಾರ ದೊರಕಿಸಿ ಕೊಡುವ ಭರವಸೆ ನೀಡಿದರು.
ಗುರುಪುರ ನೂಯಿ ಇಂದಿರಾ ನಗರದ ನಿವಾಸಿ ಧನಲಕ್ಷ್ಮಿ ಅವರ ಮನೆ ತೀವ್ರ ಗಾಳಿ ಮಳೆಯಿಂದಾಗಿ ಸಂಪೂರ್ಣ ಹಾನಿಗೊಂಡಿದ್ದು ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿ ತನ್ನ ನೇತೃತ್ವದ “IAM ಫೌಂಡೇಶನ್” ವತಿಯಿಂದ ಸಹಾಯಹಸ್ತ ಚಾಚಿದರು.