ಬಂಟ್ವಾಳ: ರಾಜ್ಯ ಸರಕಾರ ಪೆಟ್ರೋಲ್, ಡೀಸೆಲ್ ಬೆಲೆ ವಿರೋಧಿಸಿ ಚಾಲಕ ಮಾಲಕರ ಸಂಘ ಬಿ.ಸಿ. ರೋಡ್, ಟೂರಿಸ್ಟ್ ವ್ಯಾನ್ ಚಾಲಕ ಮಾಲಕರ ಸಂಘ ಬಿ.ಸಿ. ರೋಡ್, ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ ಬಂಟ್ವಾಳ ಹಾಗೂ ಸಣ್ಣ ಮತ್ತು ದೊಡ್ಡ ಗೂಡ್ಸ್ ಟೆಂಪೋ ಹಾಗೂ ಪಿಕಪ್ ಚಾಲಕ ಮಾಲಕರ ಸಂಘ ಸಮಾನ ಬಿ.ಎಂ.ಬಿ. ಸಂಘ, ಜೀತೋ ಬಿ.ಸಿ. ರೋಡ್, ರಿಕ್ಷಾ ಡ್ರೈವರ್ಸ್ ಅಸೋಸಿಯೇಷನ್ ಬಿ.ಸಿ. ರೋಡ್ ಜಂಟಿಯಾಗಿ ಪ್ರತಿಭಟನೆ ನಡೆಸಿತು.
ಈ ವೇಳೆ ರಾಜ್ಯ ಸರಕಾರ ಕೂಡಲೇ ಇಂಧನ ಬೆಲೆ ಇಳಿಕೆ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.