ಮೂಲ್ಕಿ: ಮಹಿಳಾ ಮಂಡಲ (ರಿ.) ತೋಕೂರು ಇದರ 2024- 25 ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಪ್ರೇಮಲತಾ ಶೆಟ್ಟಿಗಾರ್ ಇವರು ಆಯ್ಕೆಯಾಗಿರುತ್ತಾರೆ. ಹಾಗೆಯೇ ನೂತನ ಕಾರ್ಯದರ್ಶಿಯಾಗಿ ವನಿತಾ ಕೆ ಸನಿಲ್ ಹಾಗೂ ನೂತನ ಕೋಶಾಧಿಕಾರಿಯಾಗಿ ಜಯಲಕ್ಷ್ಮಿ ಇವರು ಆಯ್ಕೆ ಆಗಿರುತ್ತಾರೆ. ವೇದ ಶೆಟ್ಟಿಗಾರ್, ರೇಷ್ಮಾ, ಶಿಲ್ಪ ಮೇಸ್ತ, ಯಶವಂತಿ ಕುಲಾಲ್, ಸರಿತಾ, ಶುಭಪ್ರಕಾಶ್, ನೇತ್ರಾವತಿ ಇವರು ಪ್ರಸಕ್ತ ಸಾಲಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ.