ಕೇಂದ್ರ ಸರಕಾರದ ಸಾಧನೆ ವಿರುದ್ಧ ಚೊಂಬು ತೋರಿಸಿ ಇನಾಯತ್ ಅಲಿ ನೇತೃತ್ವದಲ್ಲಿ ಪ್ರತಿಭಟನೆ

ಸುರತ್ಕಲ್: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕೃಷ್ಣಾಪುರ 4ನೇ ವಾರ್ಡ್‌ನಲ್ಲಿ ಮನೆ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರ ಪರವಾಗಿ ಮತಯಾಚನೆ ನಡೆಸಿದರು.

ಈ ಸಂಧರ್ಭದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಮಾಡಿರುವ ಅನ್ಯಾಯವನ್ನು ಖಂಡಿಸಿ ಚೊಂಬು ಪ್ರದರ್ಶಿಸಿ ಪ್ರತಿಭಟಿಸಲಾಯಿತು.

ಬಳಿಕ ಮಾತಾಡಿದ ಇನಾಯತ್ ಅಲಿ ಅವರು, “ಕೇಂದ್ರದಲ್ಲಿ ಆಳ್ವಿಕೆ ಮಾಡುತ್ತಿರುವ ನರೇಂದ್ರ ಮೋದಿ ನೇತೃತ್ವದ ಸರಕಾರ ರಾಜ್ಯಕ್ಕೆ ದ್ರೋಹವೆಸಗುತ್ತಾ ಬಂದಿದೆ. ನೆರೆ ಬಂದಾಗ ಕೊರೋನ ಬಂದಾಗ ಜನರಿಗೆ ನೆರವಾಗದೆ ರಾಜ್ಯದ ಜಿಎಸ್ ಟಿ ಪಾಲನ್ನೂ ನೀಡದೆ ಸತಾಯಿಸುತ್ತಿರುವ ಕೇಂದ್ರ ಸರಕಾರ ಜನರಿಗೆ ಚೊಂಬು ನೀಡಿದೆ. ಇದೇ ಅದರ ಬಹುದೊಡ್ಡ ಸಾಧನೆಯಾಗಿದೆ” ಎಂದರು.

ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!