ಮಂಗಳೂರು: ದುಬೈಯಲ್ಲಿ ನಡೆದ ಕಾರ್ ಅಪಘಾತದಲ್ಲಿ
ಕೋಟೆಕಾರು ಬೀರಿ ನಿವಾಸಿ ವಿದಿಶಾ ಕುಲಾಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಂಗಳೂರು ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ರಾಜೀವಿ ಕುಲಾಲ್ ಮತ್ತು ವಿಠಲ್ ಕುಲಾಲ್ ಅವರ ಪುತ್ರಿಯಾಗಿದ್ದ ವಿದಿಶಾ ಕುಲಾಲ್ ಸಹ್ಯಾದ್ರಿ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದು, ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು.
2019ರಲ್ಲಿ ದುಬೈಗೆ ತೆರಳಿ ಕಳೆದ ಐದು ವರುಷಗಳಿಂದ ವಿಮಾನಯಾನ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಗುರುವಾರ ತನ್ನ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಅಪಘಾತದ ಸಂಭವಿಸಿತ್ತು. ಇತ್ತೀಚಿಗೆ ದುಬೈಯಲ್ಲಿ ಲೈಸೆನ್ಸ್ ಪಡೆದಿದ್ದರು.