“ಬಿಎಂಎಸ್ ಸಂಘಟನೆಯ ಕಾರ್ಯವೈಖರಿ ಇತರರಿಗೆ ಮಾದರಿ” -ಡಾ.ವೈ. ಭರತ್ ಶೆಟ್ಟಿ


ಸುರತ್ಕಲ್: ಭಾರತೀಯ ಬಂದರು ಮತ್ತು ಡಾಕ್ ಮಜ್ದುರ್ ಮಹಾ ಸಂಘ (BMS)ಇದರ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸಭೆಯ ಉದ್ಘಾಟನಾ ಕಾರ್ಯಕ್ರಮವು ಎನ್ ಎಂ ಪಿ ಎ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ ಭರತ್ ಶೆಟ್ಟಿ ಅವರು ಭಾಗವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಬಳಿಕ ಮಾತಾಡಿದ ಅವರು “ಬಿಎಂಎಸ್ ಸಂಘಟನೆ ತನ್ನ ಕಾರ್ಯದ ಜೊತೆಗೆ ಸದಾ ರಾಷ್ಟ್ರೀಯತೆ ಚಿಂತನೆಯ ಪರ ನಿಲ್ಲುವ ಮೂಲಕ ಇತರ ಸಂಘಟನೆಗಳಿಗೆ ಮಾದರಿಯಾಗಿದೆ. ಸಂಘಟನೆಯ ಕಾರ್ಯವೈಖರಿ ಮೆಚ್ಚುವಂತದ್ದು” ಎಂದರು.
ವೇದಿಕೆಯಲ್ಲಿ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!