ಮಂಗಳೂರು: ಶಾಂಭವಿ ಇವೆಂಟ್ ಅರೇಂಜರ್ಸ್ ಹಾಗೂ ಸಮೂಹ ಸಂಸ್ಥೆಗಳು ಕಳೆದ 30 ವರ್ಷಗಳಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ನಗರದ ಉರ್ವಾ ಸ್ಟೋರ್ ತುಳು ಭವನದ ಬಳಿಯಲ್ಲಿ ವಿಸ್ತರಣಾ ಶಾಖೆಯನ್ನು ಆದಿತ್ಯವಾರ ಲೋಕಾರ್ಪಣೆಗೊಳಿಸಲಾಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತಾಡಿದ ಬರ್ಕೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಯಜ್ನೇಶ್ ಬರ್ಕೆ ಅವರು, “ಶಾಂಭವಿ ಸಂಸ್ಥೆಯು ಕಳೆದ ಮೂರು ದಶಕಗಳಿಂದ ತುಳುನಾಡಿನಾದ್ಯಂತ ಮನೆಮಾತಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯು ಇನ್ನಷ್ಟು ಹೆಸರು ಪಡೆದು ಜನರಿಗೆ ಉತ್ತಮ ಸೌಕರ್ಯಗಳನ್ನು ಕಲ್ಪಿಸಲಿ” ಎಂದರು.
ಬಳಿಕ ಮಾತಾಡಿದ ಶಾಂಭವಿ ಇವೆಂಟ್ ಅರೇಂಜರ್ಸ್ ಮಾಲಕ ಬಾಲಕೃಷ್ಣ ಶೆಟ್ಟಿ ಅವರು, “ಸಂಸ್ಥೆಯ ನೂತನ ವಿಸ್ತರಣಾ ಶಾಖೆ ಇಂದಿಲ್ಲಿ ಶುಭಾರಂಭಗೊಂಡಿದೆ. ಮದುವೆ, ಹುಟ್ಟುಹಬ್ಬ, ಜಾತ್ರೆ, ಧಾರ್ಮಿಕ, ಸಾಂಸ್ಕೃತಿಕ ಹೀಗೆ ಎಲ್ಲಾ ಕಾರ್ಯಕ್ರಮಗಳಿಗೆ ಅಗತ್ಯವಿರುವ ವ್ಯವಸ್ಥೆ ಮತ್ತು ಸೌಕರ್ಯಗಳನ್ನು ಒಂದೇ ಕಡೆ ಕಲ್ಪಿಸಲು ಮುಂದಾಗಿದ್ದೇವೆ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ಕೊಡುವುದೇ ನಮ್ಮ ಉದ್ದೇಶ” ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬರ್ಕೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಯಜ್ನೇಶ್ ಬರ್ಕೆ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಬರ್ಕೆ ಫ್ರೆಂಡ್ಸ್ ಅಧ್ಯಕ್ಷ ಕಿಶನ್ ಬರ್ಕೆ, ದೇವದಾಸ್, ಕಾರ್ಪೋರೇಟರ್ ಗಣೇಶ್ ಕುಲಾಲ್, ಕಾರ್ಪೋರೇಟರ್ ಜಗದೀಶ್ ಶೆಟ್ಟಿ, ಬರ್ಕೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಯಜ್ನೇಶ್ ಬರ್ಕೆ, ರಾಜರತ್ನ ಸನಿಲ್, ಮೆಲ್ವಿನ್ ಲೆಸ್ಲಿ, ಶಶೀಂದ್ರ, ಕರಾವಳಿ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರೊ. ಜಯಪ್ಪ, ಪ್ರಧಾನ ಕಾರ್ಯದರ್ಶಿ ಚನ್ನಬಸಪ್ಪ ರೊಟ್ಟಿ, ಪ್ರಸನ್ನ, ಗುರುಮೂರ್ತಿ, ವಿವೇಕ್ ಶೆಟ್ಟರು, ಚನ್ನಕೇಶವ, ಹಿರಿಯ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಶಾಂಭವಿ ಇವೆಂಟ್ ಅರೇಂಜರ್ಸ್ ಮಾಲಕ ಬಾಲಕೃಷ್ಣ ಶೆಟ್ಟಿ, ಪ್ರಕೃತಿ ಫ್ಲವರ್ಸ್ ಡೆಕೋರೇಷನ್ ಮಾಲಕ ದಯಾನಂದ ಅಮೀನ್, ಗಜಾನನ ಪವರ್ ಸರ್ವಿಸ್ ನ ಪ್ರಕಾಶ್ ರಾವ್, ಮರಳು ಶಿಲ್ಪ ಕಲಾವಿದ ಹರೀಶ್ ಆಚಾರ್ಯ, ಕರಾವಳಿ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.