ಸುರತ್ಕಲ್ ನಲ್ಲಿ ಹೀಗೊಂದು ವಿಲಕ್ಷಣ ಪ್ರಕರಣ!! ಎಟಿಎಂ ಒಳಗೆ ಜೆಸಿಬಿ ನುಗ್ಗಿಸಿ ದರೋಡೆಗೆ ಯತ್ನ! ಮಾಸ್ಕ್ ಧಾರಿ, ಜೆಸಿಬಿ ಪತ್ತೆಗೆ ಎಲ್ಲೆಡೆ ಶೋಧ

ಸುರತ್ಕಲ್: ಎಟಿಎಂ ದರೋಡೆ ಮಾಡುವ ಉದ್ದೇಶದಿಂದ ಇಲ್ಲಿನ ಎಟಿಎಂ ಕೇಂದ್ರಕ್ಕೆ ಜೆಸಿಬಿ ನುಗ್ಗಿಸಿ ದರೋಡೆಗೆ ವಿಫಲ ಯತ್ನ ನಡೆಸಿದ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ.
ಇಲ್ಲಿನ ವಿದ್ಯಾದಾಯಿನಿ ಶಾಲೆಯ ಮುಂಭಾಗದ ಜಯಶ್ರೀ ವಾಣೀಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಸೌತ್ ಇಂಡಿಯನ್ ಬ್ಯಾಂಕ್ ಬ್ರಾಂಚ್ ನ ಎಟಿಎಂ‌ ಸೆಂಟರ್ ಗೆ ಕಳೆದ ರಾತ್ರಿ 2 ಗಂಟೆ ಸುಮಾರಿಗೆ ದರೋಡೆಕೋರರು ಕನ್ನ ಹಾಕಿದ್ದರು.
ಜೆಸಿಬಿ ನುಗ್ಗುವ ವೇಳೆ ಎಟಿಎಂನ ಗಾಜು ಪುಡಿಯಾಗುತ್ತಿದ್ದಂತೆಯೇ ಎಮರ್ಜೆನ್ಸಿ ಸೈರನ್ ಆಗಿದ್ದು, ಕಳ್ಳರು ಜೆಸಿಬಿ ಸಹಿತ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಕಳ್ಳರ ಚಲನವಲನ ಎಟಿಎಂ ನ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸ್ಥಳಕ್ಕೆ ಡಿಸಿಪಿ ದಿನೇಶ್ ಕುಮಾರ್ ಸಹಿತ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!