“ಕಲೆ, ಸಂಸ್ಕೃತಿ ಪೋಷಣೆಯ ಜೊತೆ ಸಮಾಜವನ್ನು ಒಗ್ಗೂಡಿಸುವ ಸಾಮಾಜಿಕ ಕಳಕಳಿಯ ಕಾರ್ಯ ಶ್ಲಾಘನೀಯ”

ಕಿನ್ನಿಗೋಳಿ: ಕಲೆ, ಸಂಸ್ಕೃತಿ ಪೋಷಣೆಯ ಜೊತೆ ಸಮಾಜವನ್ನು ಒಗ್ಗೂಡಿಸುವ ಸಾಮಾಜಿಕ ಕಳಕಳಿಯ ಕಾರ್ಯ ಶ್ಲಾಘನೀಯ ಎಂದು ಕ್ಯಾಂಪ್ಕೋ ಲಿ. ಮಂಗಳೂರು ಅಧ್ಯಕ್ಷರಾದ ಕಿಶೋರ್‌ ಕುಮಾರ್‌ ಕೋಡ್ಗಿ ಹೇಳಿದರು.
ಅವರು ಯುಗಪುರುಷ ಸಂಸ್ಥಾಪಕ ದಿ. ಕೋ ಅ ಉಡುಪ ಸಂಸ್ಕರಣ ಸಮಾರಂಭವು ಯುಗಪುರುಷ ಸಭಾಭವನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಯುಗಪುರುಷ ಸಂಸ್ಥೆ ಸ್ಥಳೀಯವಾಗಿ ಕಲೆಗೆ ಪ್ರೋತ್ಸಾಹವನ್ನು ನೀಡುವ ಜೊತೆ ಕಲಾವಿದನ ಕಲೆಗೆ ಗೌರವ ನೀಡಿ ಗೌರವಿಸುವ ಕಾರ್ಯ ಶ್ಲಾಘನೀಯ ಎಂದರು.

ಬಾಲಕೃಷ್ಣ ಉಡುಪ ಅವರ ಸ್ಪೂರ್ತಿ ಕವನ ಸಂಕಲನ ವನ್ನು ಹಾಗೂ ದೇವೇಂದ್ರ ಅಮೀನ್ ಮುಲ್ಲಕಾಡು ಅವರ ಮಾಯದ ಮಾಣಿಕ್ಯ ಪುಸ್ತಕದ ಮರು ಮುದ್ರಣದ ಬಿಡುಗಡೆಯನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾದ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ನೆರವೇರಿಸಿ ಮಾತನಾಡಿ ಸಮಾಜಕ್ಕೆ ಮಾಡುವ ನಿಸ್ವಾರ್ಥ ಸೇವೆಯ ಸಾರ್ಥಕ್ಯ ಯುಗಪುರುಷ ದ ಸಾರ್ಥಕ್ಯ ಎಂದರು.
ಈ ಸಂಧರ್ಭ ಕಟೀಲು ದೇವಲ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಆಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ತಾಳಿಪಾಡಿ ಗುತ್ತು ರಾಮಚಂದ್ರ ಶೆಟ್ಟಿ ಆಡಳಿತ ವ್ಯವಸ್ಥಾಪಕರು ವಿಜಯ ರೆಪ್ರಿಜರೇಶನ್ ಮುಂಬೈ, ರುಡಾಲ್ಪ್ ಜೋಯರ್ ನೊರೋನ್ಹ ಜನರಲ್ ಮೆನೇಜರ್ ಕಾರ್ಪೂರೇಟ್ ಕಮ್ಯುನಿಕೇಷನ್ ಎಂ ಆರ್ ಪಿ ಎಲ್, ಶ್ರೀ ಮತೀ ವಾಣಿ ಬಿ ಆಚಾರ್ಯ, ಡಾ. ನಯನಾಭಿರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು.

ಕೋ ಆ ಉಡುಪ ಪ್ರಶಸ್ತಿ ಯನ್ನು ತುಳು-ಕನ್ನಡ ಸಾಹಿತಿ, ಯಕ್ಷಗಾನ ಅರ್ಥದಾರಿ, ಪತ್ರಕರ್ತರಾದ ಕದ್ರಿ ನವನೀತ ಶೆಟ್ಟಿ ಪ್ರಧಾನಿಸಲಾಯಿತು.
ಕಮಲಾಕ್ಷಿ ಉಡುಪ ಸ್ಮರಣಾರ್ಥ ಅರ್ಚಕ ಸನ್ಮಾನ ವನ್ನು ರಾಘವೇಂದ್ರ ಉಡುಪ ಕಲ್ಲಾಜೆ ನೀಡಲಾಯಿತು.
ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿದ ಸ್ಥಳೀಯ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ನೀಡಲಾಯಿತು.
ಯುಗಪುರುಷ ದ ಭುವನಾಭಿರಾಮ ಉಡುಪ ಸ್ವಾಗತಿಸಿ, ಶರತ್ ಶೆಟ್ಟಿ ಸಂಕಲಕರಿಯ ನಿರೂಪಿಸಿ, ಅನುಷಾ ನವೀನ್ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ವಿನಾಯಕ ಯಕ್ಷ ಕಲಾ ತಂಡ (ರಿ.) ಕೆರೆಕಾಡು ಇವರಿಂದ “ಅತಿಕಾಯ-ಇಂದ್ರಜಿತು” ಯಕ್ಷಗಾನ ಬಯಲಾಟ ನಡೆಯಿತು.

error: Content is protected !!