ಸುರತ್ಕಲ್: ಚೊಕ್ಕಬೆಟ್ಟು ಕೃಷ್ಣಾಪುರ 5ನೇ ವಾರ್ಡ್ ಕಾಂಗ್ರೇಸ್ ಸಮಿತಿ ಇದರ ಆಶ್ರಯದಲ್ಲಿ ಕೃಷ್ಣಾಪುರದ ಆರನೇ ಬ್ಲಾಕಿನಲ್ಲಿ ಕರ್ನಾಟಕ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಉಚಿತ ನೋಂದಾವಣೆ ಇಂದಿರಾ ಸೇವಾ ಕೇಂದ್ರ ವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿಯವರು ಉದ್ಘಾಟನೆ ಮಾಡಿದರು. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದು ಕೊಳ್ಳಬೇಕೆಂದು ಈ ಸಂದರ್ಭದಲ್ಲಿ ವಿನಂತಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ಸಿನ ಅಧ್ಯಕ್ಷರಾದ ಪುರುಷೋತ್ತಮ್ ಚಿತ್ರಾಪುರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸುರತ್ಕಲ್ ಬ್ಲಾಕ್ ಮಹಿಳಾ ಕಾಂಗ್ರೇಸ್ ಅಧ್ಯಕ್ಷರಾದ ಶಶಿಕಲಾ ಪದ್ಮನಾಭ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾದ ಜಲೀಲ್ ಬದ್ರಿಯಾ, ವಾರ್ಡ್ ಅಧ್ಯಕ್ಷರಾದ ಕಮಾಲ್ ಚೊಕ್ಕಬೆಟ್ಟು, ಸುರತ್ಕಲ್ ಬ್ಲಾಕ್ ಮೈನಾರಿಟಿ ವಿಭಾಗದ ಅಧ್ಯಕ್ಷರಾದ ಶಮೀರ್ ಕಾಟಿಪಳ್ಳ,ಬ್ಲಾಕ್ ಉಪಾಧ್ಯಕ್ಷರಾದ ಅಬ್ದುಲ್ ಜಲೀಲ್ ಅದ್ದು, ಮಾಜಿ ಮೇಯರ್ ಗುಲ್ದಾರ್ ಬಾನು, ಮಾಜಿ ಕಾರ್ಪೊರೇಟರ್ ಅಯಾಜ್ ಕೃಷ್ಣಾಪುರ, ಮಾಜಿ ಯುವ ಕಾಂಗ್ರೇಸ್ ಅಧ್ಯಕ್ಷರಾದ ಶರೀಫ್ ಚೊಕ್ಕಬೆಟ್ಟು, ಮುಸ್ಲಿಂ ಐಕ್ಯತಾ ವೇದಿಕೆ ಸುರತ್ಕ ಲ್ ಅಧ್ಯಕ್ಷರಾದ ಅಶ್ರಫ್ ಬದ್ರಿಯಾ,BMR ಗ್ರೂಪ್ ಮಾಲಕ ದಾವುದ್ ಹಕೀಮ್,, ಮಾಜಿ ವಾರ್ಡ್ ಅಧ್ಯಕ್ಷರಾದ ಕಬೀರ್, ತೋಮಸ್ ಕಾಟಿಪಳ್ಳ,ನಿತ್ಯಾನಂದ ಕಾಟಿಪಳ್ಳ, ಆರಿಫ್, ಮೊಯಿದಿನ್,ಬೂತ್ ಅಧ್ಯಕ್ಷರಾದ ಜಫ್ರುಲ್ಲಾ, ಕಲಂದರ್, ನಜೀರ್, ಹಸೈನ,ಅಶ್ರಫ್ ಹಾಗೂ ಕಾಂಗ್ರೇಸ್ ಪಕ್ಷದ ಹಲವು ಮುಖಂಡರುಗಳು ಕಾರ್ಯಕರ್ತರು ಭಾಗವಹಿಸಿದ್ದರು ಭಾಗವಹಿಸಿದ್ದರು. ಕಾರ್ಯಕ್ರಮ ವನ್ನು ಬಶೀರ್ ಕೃಷ್ಣಾಪುರ ರವರು ನಿರೂಪಿಸಿದರು.