ಸುರತ್ಕಲ್: ಸುರತ್ಕಲ್ ಸಮೀಪದ ಬೈಕಂಪಾಡಿ ಹೆದ್ದಾರಿ ಬದಿ ಇರುವ ಎಚ್ಪಿ ಪೆಟ್ರೋಲ್ ಪಂಪ್ ಸಮೀಪದ ರಸ್ತೆಯ ಹೆದ್ದಾರಿ ಗುಂಡಿಗೆ ವ್ಯಕ್ತಿಯೊರ್ವರು ಬಲಿಯಾಗಿದ್ದಾರೆ. ಸುರತ್ಕಲ್ ರಸ್ತೆಯ ಗುಂಡಿ ಮುಚ್ಚುವಂತೆ ಸಾರಿ ಸಾರಿ ಹೇಳಿದ್ರೂ ಕೇಳದ ಇಲಾಖೆಯ ನಿರ್ಲಕ್ಷ್ಯಕ್ಕೆ ಅಮಾಯಕ ವ್ಯಕ್ತಿ ಬಲಿಯಾದಂತಾಗಿದೆ.
ಎಚ್ಪಿ ಪೆಟ್ರೋಲ್ ಪಂಪ್ ಬಳಿಯ ರಸ್ತೆಯಲ್ಲಿ ಬಾರೀ ಗಾತ್ರದ ಗುಂಡಿಯೊಂದಿದ್ದು, ಗ್ರಹಚಾರಕ್ಕೆ ಅದೇ ಗುಂಡಿಗೆ ವ್ಯಕ್ತಿಯೋರ್ವರ ಬೈಕ್ ಬಿದ್ದಿದೆ. ಇದರಿಂದ ಅವರು ಬೈಕ್ನಿಂದ ಎಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದು ಅದೇ ಸಮಯಕ್ಕೆ ಲಾರಿಯ ಚಕ್ರ ಇವರಮೇಲೆಯೇ ಚಲಿಸಿ ಪ್ರಾಣ ಕಳೆದುಕೊಂಡಿದ್ದಾರೆ.