ಬೆಂಗಳೂರು: ಸದಾ ಸೃಜನಶೀಲರಾಗಿರುವವರಿಗೆ ಬೌದ್ಧಿಕ ಚಿಂತನೆಯೂ ನಿರಂತರವಾಗಿರುತ್ತದೆ. ಹಾಗಾಗಿ ಅವರಿಗೆ ನಿತ್ಯ ನೂತನ ಅವಕಾಶಗಳು ದೊರೆಯುತ್ತಾ ನವಚೇತನಕ್ಕೆ ನಾಂದಿಯಾಗುತ್ತದೆ ಎಂದು ಅಧ್ಯಾತ್ಮಿಕಗುರು, ಅಂತಾರಾಷ್ಟ್ರೀಯ ವಾಸ್ತು ತಜ್ಞ, ವೈಜ್ಞಾನಿಕ ಜ್ಯೋತಿಷಿ, ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು
ಅವರು ನಗರದಲ್ಲಿ ರಾಜ್ಯದ ನೂತನ ಗೃಹ ಸಚಿವ ಡಾ.ಜಿ ಪರಮೇಶ್ವರ್ ದಂಪತಿಗಳಿಗೆ ತಮ್ಮ ಆಶ್ರಮದ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.
ಮೂಲತಃ ಪರಮೇಶ್ವರವರು ಸಾಧಕ ಶಕ್ತಿವಂತರಾಗಿದ್ದು ಬದುಕಿನುದ್ದಕ್ಕೂ ಅನುಸರಿಸಿದ ಹೆಜ್ಜೆಗಳು ಆನುಕರಣೀಯವಾಗಿ ಅವರನ್ನು ಮತ್ತಷ್ಟು ಜ್ಞಾನಮುಖಿ ಯನ್ನಾಗಿಸಿದೆ. ಸ್ವಸ್ಥ ಸಮಾಜ, ಶಿಕ್ಷಣದರ್ಶಿ,ರಾಜಕೀಯ ಪಕ್ಷ ನಿಷ್ಠೆಯತ್ರೀಕರಣ ಸೇವೆಗಳೊಂದಿಗೆ ನಿರಂತರ ತುಡಿತಗಳಿರುವ ಡಾ! ಜಿ ಪರಮೇಶ್ವರ್ ರವರಿಗೆ ಸೇವಾ ವಕಾಶಗಳ ಮಜಲುಗಳು ಮತ್ತಷ್ಟು ಸೇರಿಕೊಳ್ಳಲಿ ಎಂದು ಸ್ವಾಮೀಜಿಯವರು ಹಾರೈಸಿದರು.
ಸಮಾರಂಭದಲ್ಲಿ ಆಶ್ರಮದ ನಿರ್ದೇಶಕಿ ಶ್ರೀಮತಿ ರಜನಿ. ಸಿ. ಭಟ್, ರಾಘವ್ ಸೂರ್ಯ, ರಾಹುಲ್ ಸಿ ಭಟ್,ಆಶ್ರಮದ ಸಂಚಾಲಕರಾದ ಪುನೀತ್ ಕೃಷ್ಣ ಭದ್ರತಾಧಿಕಾರಿ ಪ್ರದೀಪ್ ಗೌಡ, ರಾಜು ಎಸ್ ಉಪಸ್ಥಿತರಿದ್ದರು.