ಸುರತ್ಕಲ್: ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಇಡ್ಯಾ ಪಶ್ಚಿಮ ವಾರ್ಡ್ 7 ಇಡ್ಯಾ ಬಳಿ 29 ಲಕ್ಷ ಮೊತ್ತದಲ್ಲಿ ನಿರ್ಮಿಸಲಾಗಿರುವ ನವನಗರ ಪಾರ್ಕ್ ಅನ್ನು ಶಾಸಕರಾದ ಡಾ. ಭರತ್ ಶೆಟ್ಟಿಯವರು ಲೋಕಾರ್ಪಣೆಗೊಳಿಸಿದರು.
ಕಾರ್ಪೊರೇಟರ್ ನಯನ ಆರ್ ಕೋಟ್ಯಾನ್, ಮಂಡಲದ ಉಪಾಧ್ಯಕ್ಷರಾದ ವಿಠ್ಠಲ್ ಸಾಲ್ಯಾನ್, ಶಕ್ತಿ ಕೇಂದ್ರ ಪ್ರಮುಖ್ ಸತೀಶ್ ದೇವಾಡಿಗ, ನವೀನ್ ಕುಮಾರ್, ಸುರೇಶ್ ಸಾಲ್ಯಾನ್, ಉದಯ ಆಳ್ವಾ, ಚಂದ್ರ ಶೇಖರ್ ಶೆಟ್ಟಿ, ದಿವೇಶ ಪೂಜಾರಿ, ಸ್ಥಳೀಯ ನಾಗರಿಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ 13 ನೇ ಕುಂಜತ್ತಬೈಲ್ ಉತ್ತರ ವಾರ್ಡಿನ ಜ್ಯೋತಿನಗರದಲ್ಲಿ ನಿರ್ಮಾಣ ಮಾಡಲಾಗಿರುವ ಉದ್ಯಾನವನವನ್ನು ಶಾಸಕರಾದ ಡಾ. ಭರತ್ ಶೆಟ್ಟಿಯವರು ಉದ್ಘಾಟಿಸಿದರು.
ಸ್ಥಳೀಯ ಕಾರ್ಪೊರೇಟರ್ ಶರತ್ ಕುಮಾರ್, ಬೂತ್ ಅಧ್ಯಕ್ಷರಾದ ಮಂಜುನಾಥ್, ಪ್ರಕಾಶ್ ಶಿವರಾಜ್, ರವಿರಾಜ್ ,ಗಣೇಶ್ ಕುಲಾಲ್, ಮೋಹನ್ ,ಮಾಲಿಂಗ ,ಮಣಿ, ಮಲ್ಲಣ್ಣ ,ಶಿವು, ಸುಧೀರ್ ಮತ್ತು ಕಾರ್ಯಕರ್ತರು ಹಾಗೂ ಸ್ಥಳೀಯ ಅಂಗನವಾಡಿ ಮಕ್ಕಳು ಉಪಸ್ಥಿತರಿದ್ದರು.