“ಮಂಗಳೂರು ಉತ್ತರವನ್ನು ಅಭಿವೃದ್ಧಿಯ ಎತ್ತರಕ್ಕೆ ಏರಿಸುತ್ತೇನೆ” -ಇನಾಯತ್ ಅಲಿ

 

ಸುರತ್ಕಲ್: “ಮಂಗಳೂರು ಉತ್ತರ ಕ್ಷೇತ್ರವನ್ನು ಅಭಿವೃದ್ಧಿಯ ಎತ್ತರಕ್ಕೆ ಏರಿಸುತ್ತೇನೆ. ನಾನು ಗೆದ್ದರೆ ಬರೀ 5 ವರ್ಷವಲ್ಲ, ಜೀವನ ಪೂರ್ತಿ ಜಾತಿ ಮತ ಬೇಧಭಾವ ಮಾಡದೇ ನಿಮ್ಮ ಸೇವೆ ಮಾಡಿಕೊಂಡು ಇಲ್ಲೇ ಇರುತ್ತೇನೆ” ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಹೇಳಿದ್ದಾರೆ. ಅವರು ಬೋಂದೆಲ್ ಸಮೀಪದ ಕೃಷ್ಣನಗರದಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತಾಡುತ್ತಿದ್ದರು.
“ಜನರು ಬೆಲೆ ಏರಿಕೆ, ನಿರುದ್ಯೋಗ, ನೋಟ್ ಬ್ಯಾನ್, ಜಿ ಎಸ್ ಟಿಯಂತಹ ಜನವಿರೋಧಿ ಯೋಜನೆಗಳಿಂದ ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬರಲಿದ್ದು ಮುಂದಿನ ದಿನಗಳಲ್ಲಿ ಕ್ಷೇತ್ರವನ್ನು ಎಲ್ಲಾ ರೀತಿಯಲ್ಲೂ ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಗುರಿ” ಎಂದರು.
ಮಾಜಿ ಮೇಯರ್ ಗಳಾದ ಹರಿನಾಥ್, ಕವಿತಾ ಸನಿಲ್, ಉಮೇಶ್ ದಂಡೆಕೇರಿ, ಕಾರ್ಪೋರೇಟರ್ ಅನಿಲ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!