ಬಜೆಟ್ ನಲ್ಲಿ ಬಿಲ್ಲವರ ಕಡೆಗಣನೆ: ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಆಕ್ರೋಶ

ಸುರತ್ಕಲ್: ರಾಜ್ಯದಲ್ಲಿ ಹಿಂದುಳಿದ ವರ್ಗದ ಬಿಲ್ಲವ ಈಡಿಗ (ಇತರೆ 26 ಉಪಪಂಗಡಗಳನ್ನು ಸೇರಿ) ಸುಮಾರು 70 ಲಕ್ಷ ಜನ ಸಂಖ್ಯೆಯಿರುವ ಬಿಲ್ಲವ ಈಡಿಗ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸವಿಸ್ತಾರವಾಗಿ ವಾಸವಾಗಿದ್ದು, ಇವರು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅತೀ ಹಿಂದುಳಿದ ಜನಾಂಗದವರಾಗಿರುತ್ತಾರೆ. ಈ ಜನಾಂಗದವರು ಸಾಂಸ್ಕೃತಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ತಮ್ಮದೇ ಆದ ಸೇವೆ ಮತ್ತು ಸಾಧನೆಯನ್ನು ಮಾಡುತ್ತಾ ಬಂದಿರುತ್ತಾರೆ. ನಿಗಮ ಸ್ಥಾಪನೆಯ ಬಗ್ಗೆ ಹಲವು ಬಾರಿ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದರು ಸಮಾಜದ ಬಹುಕಾಲದ ಬೇಡಿಕೆಯನ್ನು ಸರಕಾರವು 2023-24ನೇ ಸಾಲಿನ ಬಜೆಟ್ ನಲ್ಲಿ ಈಡೇರಿಸದೇ ಇರುವುದರಿಂದ ರಾಷ್ಟ್ರೀಯ ಬಿಲ್ಲವರ ಮಹಾಮಂಡಲವು ಸರಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದೆ” ಎಂದು ರಾಷ್ಟ್ರೀಯ
ಬಿಲ್ಲವರ ಮಹಾಮಂಡಲದ ಅಧ್ಯಕ್ಷ ರಾಜ್‌ಶೇಖರ್‌ ಕೋಟ್ಯಾನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಈ ಕೂಡಲೇ ಸರಕಾರವು ಬಜೆಟನ್ನು ಪುನಃ ಪರಿಶೀಲನೆ ಮಾಡಿ ಕೂಡಲೇ ಬಿಲ್ಲವ ಈಡಿಗ ನಿಗಮವನ್ನು ಸ್ಥಾಪಿಸುವರೇ ಆದೇಶವನ್ನು ಹೊರಡಿಸಬೇಕು. ಇಲ್ಲದಿದ್ದಲ್ಲಿ ಬಿಲ್ಲವ ಈಡಿಗ ಸಮಾಜವು ಒಟ್ಟಾಗಿ ತೀವ್ರ ಹೋರಾಟವನ್ನು ನಡೆಸಲಾಗುವುದು” ಎಂದು ಎಚ್ಚರಿಸಿದ್ದಾರೆ.

error: Content is protected !!