ಬಹುನಿರೀಕ್ಷಿತ “ಲಾಸ್ಟ್ ಬೆಂಚ್” ಡಿ.16ರಂದು ಕರಾವಳಿಯಾದ್ಯಂತ ತೆರೆಗೆ!

ಮಂಗಳೂರು: ಎ.ಎಸ್. ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ಆಶಿಕಾ ಸುವರ್ಣ ನಿರ್ಮಾಣದಲ್ಲಿ ಪ್ರಧಾನ್ ಎಂಪಿ ನಿರ್ದೇಶನದಲ್ಲಿ ತಯಾರಾದ ವಿಐಪೀಸ್ ಲಾಸ್ಟ್ ಬೆಂಚ್ ತುಳು ಸಿನಿಮಾ ಡಿಸೆಂಬರ್ 16ರಂದು ತೆರೆ ಕಾಣಲಿದೆ. ಮಂಗಳೂರು, ಉಡುಪಿ ಸಹಿತ ಬೇರೆ ಬೇರೆ ಕಡೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.
ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಪೃಥ್ವಿ ಅಂಬರ್, ರೂಪೇಶ್ ಶೆಟ್ಟಿ, ವಿನೀತ್ ಕುಮಾರ್, ಅಥರ್ವ ಪ್ರಕಾಶ್ ಪಾಂಡೇಶ್ವರ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ವಿಸ್ಮಯ ವಿನಾಯಕ, ರವಿ ರಾಮಕುಂಜ, ಪವೀಣ್ ಮರ್ಕಮೆ, ಆರಾಧ್ಯ ಶೆಟ್ಟಿ, ನಿರಿಕ್ಷಾ ಶೆಟ್ಟಿ, ರೂಪ
ವರ್ಕಾಡಿ, ಅನಿತಾ, ಐಸಿರಿ ಜೈನ್, ಪ್ರಾರ್ಥನಾ ಸುವರ್ಣ, ಮೊದಲಾದವರಿದ್ದಾರೆ. ಮುಖ್ಯವಾಗಿ ತುಳು ಸಿನಿಮಾರಂಗದ ಖ್ಯಾತ ನಟರಾದ ಪೃಥ್ವಿ ಅಂಬರ್, ರೂಪೇಶ್ ಶೆಟ್ಟಿ, ವಿನಿತ್ ಕುಮಾರ್ ಮೊದಲ ಬಾರಿಗೆ ಈ ಸಿನಿಮಾದ ಮೂಲಕ ಒಟ್ಟಾಗಿ ಕಾಣಿಸಿಕೊಂಡಿರುವುದು ಈ ಸಿನಿಮಾದ ವಿಶೇಷತೆಯಾಗಿದೆ.
ಪ್ರಧಾನ್ ಎಂಪಿ ನಿರ್ದೇಶನದ ಸಿನಿಮಾಕ್ಕೆ ಕೀರ್ತನ್ ಭಂಡಾರಿ ಮತ್ತು ಸೃಜನ್ ಪೇಜಾವರ್ ಕಥೆ, ಸಾಹಿತ್ಯ- ಸಂಭಾಷಣೆ ರಚಿಸಿದ್ದಾರೆ. ಸಹ ನಿರ್ದೇಶಕರಾಗಿ ರಜು ಬಿಲಿಗಿರಿ, ಆನಂದ್, ಸುಮನ್ ಸುವರ್ಣ, ಹರೀಶ್ ಇದ್ದಾರೆ. ಕ್ಯಾಮರಾ ನಿರಂಜನ್ ದಾಸ್, ನೃತ್ಯ ಸಂಯೋಜನೆ ಪುಸಣ್ಯ ಕುಮಾರ್, ವಿನಾಯಕ ಆಚಾರ್ಯ, ದೀಕ್ಷಿತ್ ಕುಮಾರ್ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ,
ಸಂಕಲನ ಸಚಿನ್, ಸಂಗೀತ ವಿನ್ಯಾಸ್ ಮದ್ಯ,ಹಿನ್ನಲೆ ಸಂಗೀತ ಗೋಕುಲ್ ಅಭಿಷೇಕ್, ಡೆನ್ಸನ್ ಮತ್ತು
ಪವನ್ ಪ್ರೊಡಕ್ಷನ್ ಟೀಮ್ ಹೆಡ್ ಆಗಿ ಕೆಲಸ ನಿರ್ವಹಿಸಿದ್ದು, ತೀಕ್ಷಣ್ ಆಚಾರ್ಯ ಹಾಗೂ ಪವನ್ ಪ್ರಚಾರ ಕಲೆ ಈ ಸಿನಿಮಾಗಿದೆ.
ಈ ಸಿನಿಮಾಕ್ಕೆ ಅಶಿಕಾ ಸುವರ್ಣ ನಿರ್ಮಾಪಕರಾಗಿದ್ದು, ಕಿರಣ್ ಶೆಟ್ಟಿ ಸಹ ನಿರ್ಮಾಪಕರಾಗಿದ್ದಾರೆ. ಕಿಶೋರ್ ಮತ್ತು ಮುರಳಿ ಕಾರ್ಯಕಾರಿ ನಿರ್ಮಾಪಕರಾಗಿರುತ್ತಾರೆ, ಈ ಸಿನೆಮಾವನ್ನು ಸಚಿನ್ ಎ.ಎಸ್. ಉಪ್ಪಿನಂಗಡಿ ಅವರು ತುಳುನಾಡಿನಾದ್ಯಂತ ವಿತರಣೆ ಮಾಡಲಿದ್ದಾರೆ. ಹಾಗೂ
ಹೊರದೇಶಗಳಲ್ಲಿ ಶೋಧನ್ ಪುಸಾದ್ ಹಾಗೂ ರೋಷನ್ ಶೆಟ್ಟಿ ಈ ಸಿನೆಮಾವನ್ನು ವಿತರಣೆ ಮಾಡಲಿದ್ದಾರೆ.

ವಿಐಪೀಸ್ ಲಾಸ್ಟ್ ಬೆಂಚ್ ತುಳುವಿನ ಮೊದಲ ಬಹು ನಾಯಕರಿರುವ ಸಿನಿಮಾ ಆಗಿದೆ. ಇದು ಮೂರು
ಬೇಜವಾಬ್ದಾರಿ ಹುಡುಗರ ಕಾಲೇಜು ಜೀವನದ ಕಥೆಯನ್ನು ಹೊಂದಿದೆ. ಸಿನಿಮಾವು ಹಾಸ್ಯ ಪ್ರಧಾನವಾಗಿದ್ದರೂ ಸೆಂಟಿಮೆಂಟ್ ಕಥೆಯನ್ನೂ ಹೊಂದಿದೆ. ಒಂದು
ಕಡೆ ಹಾಸ್ಯದ ಹೊನಲು, ಮತ್ತೊಂದು ಭಾವನಾತ್ಮಕ ಸನ್ನಿವೇಶಗಳ ಮಿಶ್ರಣವಾಗಿರುವ ಈ ಕಥೆಯಲ್ಲಿ
ಪ್ರೇಕ್ಷಕರಿಗೆ ಹೊಟ್ಟೆ ತುಂಬಾ ನಗಾಡಲು ಯಥೇಚ್ಛ ಅವಕಾಶಗಳಿವೆ. ಕೋಸ್ಟಲ್‌ವುಡ್‌ನ ಖ್ಯಾತನಾಮ
ಕಲಾವಿದರೆಲ್ಲರೂ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಸಿನಿಮಾವನ್ನು ಮಂಗಳೂರು ಸುತ್ತಮುತ್ತಲಿನ ಹಲವಾರು ಅತ್ಯಾಕರ್ಷಕ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದ್ದು, ಡಿ. 16 ರಂದು ಸಿನಿಮಾ ತುಳುನಾಡಿನಾದ್ಯಂತ ಬಿಡುಗಡೆಯಾಗಲಿದೆ. ಜೊತೆಗೆ ವಿದೇಶಗಳಲ್ಲೂ ಸಿನಿಮಾ ತೆರೆಕಾಣಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

error: Content is protected !!