ಕಾಟಿಪಳ್ಳ ವಿವಿಧ ಕಾಮಗಾರಿಗಳಿಗೆ ಶಾಸಕ ಭರತ್ ಶೆಟ್ಟಿ ಗುದ್ದಲಿಪೂಜೆ!

ಸುರತ್ಕಲ್: ಲೋಕೋಪಯೋಗಿ ಇಲಾಖೆಯಿಂದ ಮತ್ತು ಸಣ್ಣ ನೀರಾವರಿ ಯೋಜನೆಯಿಂದ ಸುಮಾರು 1ಕೋಟಿ 46 ಲಕ್ಷ ರೂ. ಅನುದಾನದಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆಯನ್ನು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ.ಭರತ್ ಶೆಟ್ಟಿ ಮತ್ತು ಮಂಗಳೂರು ಮೇಯರ್ ಜಯಾನಂದ್ ಅಂಚನ್ ಮಂಗಳವಾರ ನೆರೆವೇರಿಸಿದರು.
ಈ ವೇಳೆ ಮಾತಾಡಿದ ಶಾಸಕ ಭರತ್ ವೈ. ಶೆಟ್ಟಿ ಅವರು, “ಅಭಿವೃದ್ಧಿ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಮಂಗಳೂರು ಉತ್ತರ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ. ಹೀಗಾಗಿ ಇಂದು ಕಾಟಿಪಳ್ಳ ವಾರ್ಡ್ ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಜನರಿಗೆ ಮೂಲಭೂತ ಸೌಕರ್ಯ ಒದಗಿಸುವುದು ಮೊದಲ ಅಗತ್ಯವಾಗಿದ್ದು ಮುಂದಿನ ಎರಡು ತಿಂಗಳುಗಳಲ್ಲಿ ಎಲ್ಲ ಕಾಮಗಾರಿಗಳು ಪೂರ್ತಿಗೊಳ್ಳಲಿವೆ” ಎಂದರು.
ಸ್ಥಳೀಯ ಕಾರ್ಪೊರೇಟರಾದ ಲೋಕೇಶ್ ಬೊಳ್ಳಾಜೆ, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಮಂಡಲ ಸದಸ್ಯರಾದ ಜಯಕುಮಾರ್ ಗಣೇಶಪುರ, ಶೈಲಜ ಗಣೇಶ್ ಕಟ್ಟೆ, ಶಕ್ತಿಕೇಂದ್ರ ಪ್ರಮುಖ್ ಬಾಲಕೃಷ್ಣ ಸುವರ್ಣ, ಬೂತ್ ಅಧ್ಯಕ್ಷರಾದ ಶಾಂತಕುಮಾರ್ ಶೆಟ್ಟಿಗಾರ್, ಗಿರಿಧರ್ ಶೆಟ್ಟಿ, ಹೊನ್ನಯ್ಯ ಕೋಟ್ಯಾನ್, ಶೈಲೇಶ್, ಸುನಿಲ್ ಪ್ರಭು, ಸಪ್ನಾ ಸುನಿಲ್, ದಿನೇಶ್ ಶೆಟ್ಟಿ, ಭಗವಾನ್ ದಾಸ್, ಶಶಿಧರ್ ದೇವಾಡಿಗ, ರೋಹಿತ್, ಯಾಧವ ಶೆಟ್ಟಿಗಾರ್, ಎಸ್. ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಹರೀಶ್ ಪಣಂಬೂರು, ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

error: Content is protected !!