ನಾಳೆ ತೋಕೂರು ಶ್ರೀ ಸುಬ್ರಹ್ಮಣ್ಯ ದೇಗುಲ ಜೀರ್ಣೋದ್ಧಾರ ಮುಂಬಯಿ ಉಪ ಸಮಿತಿ ಸಭೆ

ಹಳೆಯಂಗಡಿ: ಜೀರ್ಣೋದ್ಧಾರಗೊಳ್ಳಲಿರುವ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರು ಇದರ ಜೀರ್ಣೋದ್ಧಾರ ಮುಂಬಯಿ ಉಪ ಸಮಿತಿ ಸಭೆಯು ನಾಳೆ ಬೆಳಗ್ಗೆ ಘಾಟ್ಕೊಪರ್ ಸಾಮ್ರಾಟ್ ಹೋಟೆಲ್ ನ ಸಭಾಂಗಣದಲ್ಲಿ ನಡೆಯಲಿದೆ. ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿದಾಸ್ ಭಟ್ ಅಧ್ಯಕ್ಷತೆಯಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ತೋ ಕೂರುಗುತ್ತು ಭಾಸ್ಕರ್
ಶೆಟ್ಟಿ ಉಪಸ್ಥಿತಿಯಲ್ಲಿ ನಡೆಯಲಿರುವ ಸಭೆಯನ್ನು ದೇವಸ್ಥಾನದ ಭಕ್ತರು, ಊರ ಪರವೂರ ದಾನಿಗಳು ಸೂಕ್ತ
ಸಲಹೆ -ಸೂಚನೆ ನೀಡಿ ಯಶಸ್ವಿಗೊಳಿಸಬೇಕಾಗಿ ಮುಂಬಯಿ ಸಮಿತಿ ಅಧ್ಯಕ್ಷ ನಾಗೇಶ್ ಜಿ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ರಾಮಣ್ಣಬಿ. ದೇವಾಡಿಗ, ಕೋಶಾಧಿಕಾರಿ ಶಶಿಧರ ಆರ್. ಶೆಟ್ಟಿ ತಿಳಿಸಿದ್ದಾರೆ.

error: Content is protected !!