“ಟ್ಯೂಷನ್ ಗೆ ಬಂದಿದ್ದ ಬಾಲಕಿಯನ್ನು ನಾನೇ ಕೊಂದೆ” -ಸತ್ಯ ಒಪ್ಪಿಕೊಂಡ ಕಾಮುಕ!

ಮಂಡ್ಯ: ಟ್ಯೂಷನ್‌ಗೆಂದು ತೆರಳಿದ್ದ ಬಾಲಕಿ ಶವವಾಗಿ ಪತ್ತೆಯಾದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದು ಆರೋಪಿ ಟ್ಯೂಷನ್ ಶಿಕ್ಷಕ ತಾನೇ ಆಕೆಯನ್ನು ಕೊಂದಿದ್ದಾಗಿ ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಬಾಯ್ಬಿಟ್ಟಿದ್ದಾನೆ.


ಮಳವಳ್ಳಿ ಪೇಟೆಯ ನಿವಾಸಿ 6ನೇ ತರಗತಿ ವಿದ್ಯಾರ್ಥಿನಿ ನಿರ್ಮಾಣ ಹಂತದ ಮನೆಯ ಮುಂಭಾಗದಲ್ಲಿದ್ದ ನೀರಿನ ಸಂಪ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಘಟನೆಯಲ್ಲಿ ಟ್ಯೂಷನ್ ಶಿಕ್ಷಕ ಕಾಂತರಾಜು (45) ಎಂಬವನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದರು. ಮೊನ್ನೆ ಬೆಳಗ್ಗೆ 11 ಗಂಟೆಗೆ ಟ್ಯೂಶನ್‌ಗೆ ಎಂದು ಮನೆಯಿಂದ ತೆರಳಿದ್ದ ಅಶ್ವಿನಿ ಮತ್ತು ಸುರೇಶ್ ದಂಪತಿಯ ಮಗಳಾದ ದಿವ್ಯಾ, ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ
ಗಾಬರಿಯಾದ ಪೋಷಕರು ಟ್ಯೂಶನ್ ಸೆಂಟರ್
ಸೇರಿದಂತೆ ಅಕ್ಕಪಕ್ಕದಲ್ಲಿ ವಿಚಾರಿಸಿದರೂ ಬಾಲಕಿ
ಪತ್ತೆಯಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ನೀರಿನ ಸಂಪ್ ನಲ್ಲಿ ಶವ ಪತ್ತೆಯಾಗಿತ್ತು. ಬಾಲಕಿಯ ಶವವನ್ನು ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿದು ಬರಲಿದೆ.

error: Content is protected !!