ನವದೆಹಲಿ: ದೇಶಾದ್ಯಂತ ಕಳೆದ 2 ವಾರಗಳ ಕಾಲ ಪಿಎಫ್‌ಐ ಸಂಘಟನೆಯ ಪ್ರಮುಖರ ಮೇಲೆ ಎನ್ ಐ ಎ ದಾಳಿ ನಡೆದ ಬೆನ್ನಲ್ಲೇ ಕೇಂದ್ರ ಸರ್ಕಾರ 5 ವರ್ಷಗಳ ಕಾಲ ಪಿಎಫ್‌ಐ ಸಂಘಟನೆಯನ್ನು ಬ್ಯಾನ್ ಮಾಡಿದೆ. ಯುಎಪಿಎ ಕಾಯ್ದೆಯಡಿ ನಿಷೇಧಸಿದೆ.
ನೂರಾರು ಪಿಎಫ್‌ಐ ನಾಯಕರು, ಕಾರ್ಯಕರ್ತರನ್ನು ಬಂಧಿಸಿದ ಬೆನ್ನಲ್ಲೇ ನರೇಂದ್ರ ಮೋದಿ ನೇತೃತ್ಬದ ಕೇಂದ್ರ ಸರ್ಕಾರ ಈ ನಿಷೇಧ ಆದೇಶ ಹೊರಡಿಸಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ 8 ಅಂಗಸಂಸ್ಥೆಗಳನ್ನು ಐದು ವರ್ಷಗಳ ಅವಧಿಗೆ ಕಾನೂನುಬಾಹಿರ ಸಂಘ ಎಂದು ತಕ್ಷಣದಿಂದ ಜಾರಿಗೆ ಬರುವಂತೆ ಘೋಷಿಸುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಆದೇಶ ನೀಡಿದೆ.