ನಾಳೆಯಿಂದ ಸುರತ್ಕಲ್ ನಲ್ಲಿ “ಪಟಾಕಿ ಉತ್ಸವ” ದೀಪಾವಳಿಯ ಸಂಭ್ರಮಕ್ಕೆ ವಿಶೇಷ ದರದಲ್ಲಿ ಆಕರ್ಷಕ ಪಟಾಕಿ ಮಾರಾಟ! ಲಕ್ಕಿ ಡ್ರಾದಲ್ಲಿ 50 ಅದ್ಭುತ ಬಹುಮಾನಗಳ ಸುರಿಮಳೆ!!

ವಿಶೇಷ ವರದಿ

ಸುರತ್ಕಲ್: ಹಲವು ಹೆಸರಾಂತ ಸಂಸ್ಥೆಗಳ ಸಹಯೋಗದೊಂದಿಗೆ ಕಳೆದ ಹಲವಾರು ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಜನಪ್ರಿಯ ‘ಪಟಾಕಿ ಮೇಳ’ ಈ ಬಾರಿ ಮತ್ತೊಮ್ಮೆ ಸಾರ್ವಜನಿಕರ ಮುಂದೆ ಬಂದಿದೆ. ದೀಪಾವಳಿ ಹಬ್ಬವನ್ನು ಅತ್ಯಂತ ಉತ್ಸಾಹ ಹಾಗೂ ಸುರಕ್ಷಿತವಾಗಿ ಆಚರಿಸಲು ಬಯಸುವ ಗ್ರಾಹಕರಿಗೆ ಈ ಮೇಳವು ಅತ್ಯುತ್ತಮ ವೇದಿಕೆಯಾಗಲಿದೆ.
ಈ ಬಾರಿಯ ಪಟಾಕಿ ಉತ್ಸವವು ನವೆಂಬರ್ 06ರಿಂದ ನವೆಂಬರ್ 10ರವರೆಗೆ ಅದ್ಧೂರಿಯಾಗಿ ನಡೆಯಲಿದೆ. ವಿಶೇಷ ಸೂಚನೆಯೇನೆಂದರೆ, ಈ ಬಾರಿಯ ಪಟಾಕಿ ಮೇಳದ ಸ್ಥಳವನ್ನು ಬದಲಾಯಿಸಲಾಗಿದ್ದು, ಸುರತ್ಕಲ್‌ನ ಗೋವಿಂದದಾಸ ಕಾಲೇಜ್ ಮೈದಾನದಲ್ಲಿ ಈ ಮೇಳವು ಆಯೋಜನೆಗೊಂಡಿದೆ. ಸಾರ್ವಜನಿಕರು ಸ್ಥಳ ಬದಲಾವಣೆಯನ್ನು ಗಮನಿಸಿ ಮೇಳಕ್ಕೆ ಆಗಮಿಸುವಂತೆ ಆಯೋಜಕರು ತಿಳಿಸಿದ್ದಾರೆ.


ಕಡಿಮೆ ಬೆಲೆ, ಅತ್ಯುತ್ತಮ ಗುಣಮಟ್ಟ ಹಾಗೂ ಶಿವಕಾಶಿಯಿಂದ ನೇರ ಮಾರಾಟ ಎಂಬುದು ಈ ಮೇಳದ ಮುಖ್ಯ ವಿಶೇಷತೆಯಾಗಿದೆ. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ವಿವಿಧ ರೀತಿಯ ಪಟಾಕಿಗಳು ಲಭ್ಯವಿವೆ. ಫ್ಯಾನ್ಸಿ ಸ್ಪಾರ್ಕ್ಲರ್ಸ್‌ಗಳು (Fancy Sparklers) 7 ಸೆ.ಮೀ ನಿಂದ 30 ಸೆ.ಮೀ ವರೆಗೆ ಕೇವಲ ₹15 ರಿಂದ ₹80 ರವರೆಗೆ ಸಿಗಲಿವೆ. ಹಾಗೆಯೇ 30 ಶಾಟ್ಸ್‌ನಿಂದ 120 ಶಾಟ್ಸ್ ವರೆಗಿನ ವಿವಿಧ ವೈವಿಧ್ಯಗಳು ಹಾಗೂ 1k ಇಂದ 5k ವಾಲಾಗಳು ಅತ್ಯಕರ್ಷಕ ಬೆಲೆಯಲ್ಲಿ ದೊರೆಯಲಿವೆ. ಇದರೊಂದಿಗೆ ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಮೆಚ್ಚುವಂತಹ ವಿವಿಧ ಗಿಫ್ಟ್ ಬಾಕ್ಸ್‌ಗಳು (Gift Boxes) ₹550 ರಿಂದ ₹1,550 ರವರೆಗಿನ ಶ್ರೇಣಿಯಲ್ಲಿ ಲಭ್ಯವಿವೆ. ಬಿಜಿಲಿ ಪಟಾಕಿಗಳು ಎರಡು ವಿಧಗಳಲ್ಲಿ ₹40 ಹಾಗೂ ₹70 ಕ್ಕೆ ಸಿಗಲಿದ್ದು, ಇದಕ್ಕೆ ಯಾವುದೇ ರಿಯಾಯಿತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಈ ಬಾರಿಯ ಪಟಾಕಿ ಮೇಳದ ಮತ್ತೊಂದು ದೊಡ್ಡ ಆಕರ್ಷಣೆಯೆಂದರೆ ‘ಲಕ್ಕಿ ಡ್ರಾ’ (Lucky Draw) ಸ್ಪರ್ಧೆ! ಪ್ರತಿ ₹500 ರ ಖರೀದಿಗೆ ಒಂದು ಕೂಪನ್ ಉಚಿತವಾಗಿ ನೀಡಲಾಗುತ್ತಿದ್ದು, ಒಟ್ಟು 50 ಅದ್ಭುತ ಬಹುಮಾನಗಳನ್ನು ಗೆಲ್ಲುವ ಅವಕಾಶವಿGದೆ. 50ಕ್ಕೆ 50 ಬಹುಮಾನಗಳು ಗ್ರಾಹಕರಿಗೆ ಖಂಡಿತವಾಗಿ ಸಿಗಲಿವೆ. ಈ ಲಕ್ಕಿ ಡ್ರಾದ ದಿನಾಂಕ ಹಾಗೂ ಸಮಯವು 21ನೇ ನವೆಂಬರ್ ರಾತ್ರಿ 9 ಗಂಟೆಗೆ ನಿಗದಿಯಾಗಿದ್ದು, ಸುರತ್ಕಲ್‌ನ ಗೋವಿಂದದಾಸ ಕಾಲೇಜು ಮೈದಾನದಲ್ಲಿ ಇದು ಜರುಗಲಿದೆ. ವಿಜೇತರು ತಮ್ಮ ಬಹುಮಾನವನ್ನು ‘ಅಗರಿ ಎಂಟರ್‌ಪ್ರೈಸಸ್, ಸುರತ್ಕಲ್ ಇಲ್ಲಿ ಪಡೆದುಕೊಳ್ಳಬಹುದಾಗಿದೆ. ಗೆದ್ದವರ ಸಮ್ಮುಖದಲ್ಲಿ ಡ್ರಾ ನಡೆಸಲಾಗುವುದು ಹಾಗೂ ಫಲಿತಾಂಶವನ್ನು ವಾಟ್ಸಾಪ್ ಮೂಲಕ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

Advt

“ನಮಗೆ ಬೇರೆ ಯಾವುದೇ ಶಾಖೆಗಳಿಲ್ಲ” ಎಂದು ಸ್ಪಷ್ಟಪಡಿಸಿರುವ ಆಯೋಜಕರು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೋರಿದ್ದಾರೆ. ಕುಳೂರು ಹಾಗೂ ಸುರತ್ಕಲ್‌ ನ ಪ್ರಸಿದ್ಧ ಅಗರಿ ಎಂಟರ್‌ಪ್ರೈಸಸ್ ಫರ್ನಿಚರ್ & ಎಲೆಕ್ಟ್ರಾನಿಕ್ಸ್ ಇದರ ಪ್ರಮುಖ ನೇತೃತ್ವ ವಹಿಸಿದೆ. ಹೆಚ್ಚಿನ ಮಾಹಿತಿಗಾಗಿ 8792594065 ಅಥವಾ 7892240030 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

error: Content is protected !!