ಮಧ್ಯ ಕೋರ್ದಬ್ಬು ದೈವಸ್ಥಾನದ ಪುನರ್ ನಿರ್ಮಾಣಕ್ಕಾಗಿ ಮುಷ್ಠಿ ಕಾಣಿಕೆ ಹಾಗೂ ಶಿಲಾನ್ಯಾಸ

ಸುರತ್ಕಲ್: ದೈವಸ್ಥಾನದ ಜೀರ್ಣೋದ್ಧಾರದಿಂದ ಗ್ರಾಮದ ಅಭಿವೃದ್ಧಿಗೆ ಹೊಸ ಚೈತನ್ಯ ದೊರೆಯಲಿದೆ. ಗ್ರಾಮಸ್ಥರ ಸಹಮತ ಹಾಗೂ ಒಗ್ಗಟ್ಟಿನಿಂದ ದೈವದ ಸಾನಿಧ್ಯವೂ ವೃದ್ದಿಯಾಗಲಿದೆ ಎಂದು ಮಧ್ಯ ಖಡ್ಗೇಶ್ವರ ಖಡ್ಗೇಶ್ವರಿ ದೇವಸ್ಥಾನದ ತಂತ್ರಿಗಳಾದ ಎಡಪದವು ವೆಂಕಟೇಶ್ ತಂತ್ರಿ ನುಡಿದರು. ಅವರು ಮಧ್ಯ ಕೋರ್ದಬ್ಬು ದೈವಸ್ಥಾನದ ಪುನರ್ ನಿರ್ಮಾಣದ ಅಂಗವಾಗಿ ನಡೆದ ಮುಷ್ಟಿ ಕಾಣಿಕೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ದೈವದ ಕಾರ್ಯವನ್ನು ಎಲ್ಲರೂ ಸಮಾನ ಮನಸ್ಸಿನಿಂದ ಒಗ್ಗಟ್ಟಿನಿಂದ ನಡೆಸಿದಾಗ ಶೀಘ್ರವಾಗಿ ಪರಿಪೂರ್ಣ ಸಾನಿಧ್ಯ ನಿರ್ಮಾಣವಾಗುತ್ತದೆ ದೈವಸ್ಥಾನದ ಜೀರ್ಣೋದ್ಧಾರವು ಕೇವಲ ದೇವಾಲಯದ ಅಭಿವೃದ್ಧಿಗೆ ಸೀಮಿತವಾಗದೆ ಇಡೀ ಗ್ರಾಮದ ಪ್ರಗತಿಗೂ ಪೂರಕವಾಗಲಿದೆ ಎಂದರು. ಮುಂಬಯಿ ಉದ್ಯಮಿ ರಮೇಶ್ ಶೆಟ್ಟಿ ಸಾಣೂರು ಮಧ್ಯ ಹೊಸಮನೆ ಮುಖ್ಯ ಅತಿಥಿಯಾಗಿ ಮಾತನಾಡಿ ನಮ್ಮ ಸುತ್ತಲಿನ ಬದುಕು ಪರಂಪರೆ ಹಾಗೂ ಸಾಂಸ್ಕೃತಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಅನುಭವಿಗಳಿಗೆ ಕಲ್ಪನೆ ಮತ್ತು ಸೃಜನಶೀಲತೆಯ ಸ್ಮರ್ಶ ನೀಡಿದಾಗ ಉತ್ತಮ ದೈವಸ್ಥಾನ ನಿರ್ಮಾಣ ಸಾಧ್ಯವಾಗುತ್ತದೆ ಎಂದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕೋರ್ದಬ್ಬು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ್ ಚೌಟ ಮಧ್ಯ ಮಾತನಾಡಿ ಯುವಕರ ಒಗ್ಗಟ್ಟು ಮತ್ತು ಹಿರಿಯರ ಮಾರ್ಗದರ್ಶನ ಕೊಡುಗೈ ದಾನಿಗಳ ಕೊಡುಗೆಯಿಂದ ದೈವಸ್ಥಾನದ ಅತೀ ಶೀಘ್ರವಾಗಿ ಮಾದರಿ ದೇವಾಲಯವಾಗಿ ರೂಪುಗೊಳ್ಳಲಿದೆ ಎಲ್ಲರೂ ಸಹಕರಿಸಬೇಕು ಇದರಿಂದ ಇಡೀ ಗ್ರಾಮ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ ಎಂದರು.

ವೇದಿಕೆಯಲ್ಲಿ ಮಧ್ಯ ದೇವಸ್ಥಾನದ ಅರ್ಚಕರಾದ ಕೃಷ್ಣಮೂರ್ತಿ ಭಟ್, ಮಧು ಚಂದ್ರ ಪಾತ್ರಿ ಬಾರ್ಕೂರು, ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್, ಮುಂಬಯಿ ವಿ.ಕೆ,ಸಮೂಹ ಸಂಸ್ಥೆಯ ಸಿ ಎಂ ಡಿ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು, ಗಡಿಪ್ರಧಾನರಾದ ಶಂಕರ ಹೆಗಡೆ ಮಧ್ಯಬೀಡು, ಮುಂಬಯಿ ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ, ಮಧ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಭಾಲಾಕ್ಷಿ ಶೆಟ್ಟಿ ಕುಂಜರಬಾಳಿಕೆ, ಮುಂಬಯಿ ಉದ್ಯಮಿ ಅಶೋಕ್ ಶೆಟ್ಟಿ ಮಧ್ಯ ಕಾಳದೂಮಣ್ಣ ಮನೆ, ಕೋರ್ದಬ್ಬು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ ಕೊಂಬಗುಡ್ಡೆ, ಮಧ್ಯ ಖಡ್ಗೇಶ್ವರ ಖಡ್ಗೇಶ್ವರಿ ಮಹಿಳಾ ಮಂಡಲದ ಅಧ್ಯಕ್ಷೆ ಶೋಭಾ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಉದ್ಯಮಿ ಸುರೇಶ್ಚಂದ್ರ ಶೆಟ್ಟಿ ಮಂಗಳೂರು, ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸೇವಾ ಟ್ರಸ್ಟ್ ಅಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ, ಮುಂಬಯಿ ಉದ್ಯಮಿ ಜಗದೀಶ್ ಶೆಟ್ಟಿ ಪಡಿ ಮನೆ ಮಧ್ಯ ,ವಿನುತಾ ಕರ್ಕೇರ ಬೊಳೂರು ಮಂಗಳೂರು, ಸ್ನೇಹಲ್ ಕರ್ಕೇರ ಬೊಳೂರು ಮಂಗಳೂರು, ಗ್ರಾಮ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಕೋರ್ದಬ್ಬು ದೈವಸ್ಥಾನದ ಅರ್ಚಕರಾದ ಸೀತಾರಾಮ ಮುಖಾರಿ ,ಸೀತಾರಾಮ ಕೊಡಿಕಲ್ ಮುಂತಾದವರು ಉಪಸ್ಥಿತರಿದ್ದರು. ಕೋರ್ದಬ್ಬು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪುಷ್ಷರಾಜ್ ಶೆಟ್ಟಿ ಸ್ವಾಗತಿಸಿ ಕೋಶಾಧಿಕಾರಿ ದಿನೇಶ್ ದೇವಾಡಿಗ ಧನ್ಯವಾದ ಸಲ್ಲಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

Advt
error: Content is protected !!