
ಹೆಬ್ರಿ: ಶಿರ್ವದಲ್ಲಿ ಇತ್ತೀಚೆಗೆ ನಡೆದ ಉದ್ಯಮಿ ಡೇವಿಡ್ ಡಿಸೋಜಾ ಹ ತೈಗೆ ಮೂವರು ಸುಪಾರಿ ಕಿಲ್ಲರ್ ಗಳನ್ನು ಕಳುಹಿಸಿದ್ದ ಬಿಹಾರ ರಾಜ್ಯ ಮೂಲದ ಮುಂಬಯಿಯ ನಟೋರಿಯಸ್ ಗ್ಯಾಂಗ್ ಸ್ಟರ್ ಅನುಜ್ ಪಾಟೀಲ್ (35) ಆರೋಪಿಯನ್ನು. ಆರೋಪಿಯನ್ನು ತನಿಖೆಗಾಗಿ ಪೊಲೀಸ್ ವಾಹನದಲ್ಲಿ ಕರೆತರುವ ವೇಳೆ, ಹೆಬ್ರಿ ತಾಲೂಕಿನ ಸೋಮೇಶ್ವರದಲ್ಲಿ ಆರೋಪಿ ಮೂತ್ರ ವಿಸರ್ಜನೆಗೆ ಎಂದು ಪೊಲೀಸ್ ವಾಹನದಿಂದ ಇಳಿದಾಗ, ಪೊಲೀಸರಿಂದ ಪರಾರಿಯಾಗಲು ಯತ್ನಿಸಿ ಕೊಲ್ಲೂರು ಠಾಣೆಯ ಪಿಎಸ್ಐ ಅವರ ಆಯುಧ ಕಸಿದು ಫೈಯರ್ ಮಾಡಿದ್ದು, ಕಾರ್ಯಾಚರಣೆಯಲ್ಲಿ ತೊಡಗಿದ್ದ ಇನ್ನಿತರ ಪೊಲೀಸರ ಜೀವ ರಕ್ಷಣೆಗಾಗಿ ಆರೋಪಿಯ ಕಾಲಿಗೆ ಕುಂದಾಪುರ ಠಾಣೆಯ ಪಿಎಸ್ಐ ನಂಜ ನಾಯ್ಕ್ ಗುಂಡೇಟು ಹೊಡೆದಿದ್ದಾರೆ. ಗಾಯಗೊಂಡಿರುವ ಆರೋಪಿ ಅನುಜ್ ಪಾಟೀಲ್ ನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
