ಉಡುಪಿ: ನವಜಾತ ಶಿಶು ಮಾರಾಟ ಮಾಡಿದ್ದ ವೈದ್ಯ ಸಹಿತ ಇಬ್ಬರು ಆರೆಸ್ಟ್!

ಉಡುಪಿ: ನವಜಾತ ಶಿಶುವನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯ ಕಾಮತ್ ನರ್ಸಿಂಗ್ ಹೋಮ್ ನಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯ ಸಹಿತ ಇಬ್ಬರನ್ನು ಉಡುಪಿ ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕಾಮತ್ ನರ್ಸಿಂಗ್ ಹೋಮ್ ನ ಡಾ.ಸುರೇಂದ್ರ ಹಾಗು ಮಲ್ಪೆ ನೇಜಾರು ನಿವಾಸಿ ಪ್ರಕಾಶ್ ಬಂಧಿತರು. ಸುಬ್ರಹ್ಮಣ್ಯ ನಗರದ ನವಜಾತ ಶಿಶುವೊಂದನ್ನು ಪ್ರಕಾಶ್ ಎಂಬವರಿಗೆ ಮಾರಾಟ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಮಹಿಳಾ ಠಾಣೆಯ ಪೊಲೀಸರು ಸಾಕ್ಷ್ಯಧಾರಗಳ ಆಧಾರದಲ್ಲಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

: ನವಜಾತ ಶಿಶುವನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯ ಕಾಮತ್ ನರ್ಸಿಂಗ್ ಹೋಮ್ ನ ವೈದ್ಯ ಸೇರಿದಂತೆ ಇಬ್ಬರನ್ನು ಉಡುಪಿ ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕಾಮತ್ ನರ್ಸಿಂಗ್ ಹೋಮ್ ನ ಡಾ. ಸುರೇಂದ್ರ ಹಾಗು ಮಲ್ಪೆ ನೇಜಾರು ನಿವಾಸಿ ಪ್ರಕಾಶ್ ಬಂಧಿತ ಆರೋಪಿಗಳು.

ಸುಬ್ರಹ್ಮಣ್ಯ ನಗರದ ನವಜಾತ ಶಿಶುವೊಂದನ್ನು ಪ್ರಕಾಶ್ ಎಂಬವರಿಗೆ ಮಾರಾಟ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಮಹಿಳಾ ಠಾಣೆಯ ಪೊಲೀಸರು ಸಾಕ್ಷ್ಯಧಾರಗಳ ಆಧಾರದಲ್ಲಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !!