ಕರ್ನಾಟಕ ನಾಯರ್‌ ಸರ್ವೀಸ್‌ ಸೊಸೈಟಿಯ ಅಧ್ಯಕ್ಷರಾಗಿ ಮುರಳಿ ಹೊಸಮಜಲು ಪುನರಾಯ್ಕೆ

ಮಂಗಳೂರು: ಕರ್ನಾಟಕ ನಾಯರ್‌ ಸೊಸೈಟಿ ಮಂಗಳೂರು ಘಟಕದ ಸಾಮಾನ್ಯ ಸಭೆಯು ಮಂಗಳೂರಿನ ಕೆ.ಪಿ.ಟಿ ಬಳಿಯಿರುವ ಎಸ್‌. ಕ್ಯೂಬ್‌ ಸೆಂಟರ್‌ ಸಭಾಂಗಣದಲ್ಲಿ ಜರುಗಿತು, ಸಾಮಾನ್ಯ ಸಭೆಯ ನಂತರ ಜರುಗಿದ ಮುಂದಿನ 2026-28 ನೇ ಅವಧಿಗೆ ಅಧ್ಯಕ್ಷರಾಗಿ ಮುರಳಿ ಹೊಸಮಜಲು, ಕಾರ್ಯದರ್ಶಿಯಾಗಿ ವಿ.ಎಮ್.ಸತೀಶನ್‌ ಪುನರಾಯ್ಕೆಗೊಂಡರು. ಖಜಾಂಚಿಯಾಗಿ ಅಜಯಕುಮಾರ್‌ , ಉಪಾಧ್ಯಕ್ಷರಾಗಿ ವಾಸಂತಿ ನಾಯರ್‌, ಜತೆ ಕಾರ್ಯದರ್ಶಿಯಾಗಿ ಮಂಜು ಅಜಿತ್, ಜತೆ ಖಜಾಂಚಿಯಾಗಿ ರವೀಂದ್ರನಾಥ್‌, ಬೋರ್ಡ್ ಮೆಂಬರುಗಳಾಗಿ ವಿಜಯಕುಮಾರ್‌, ಎಮ್.ವಿ. ರಾಜನ್‌, ಎ.ಎಸ್.ಮೋಹನ್‌ ರವರು, ಸಮಿತಿಯ ಸದಸ್ಯರಾಗಿ ಜೋತಿಷ್‌ ಕುಮಾರ್‌, ಜಯಲಕ್ಷ್ಮೀ ಚಂದ್ರಮೋಹನ್‌ , ಮಣಿಕಂಠನ್‌, ವಿನೋದ್‌ವಿನೋದ್‌ರಾಜ್‌, ಹರೀಶ್‌ ಗೋವಿಂದ್‌, ದೇವರಾಜ್‌ , ವಿನಯನ್‌ ನಾಯರ್‌, ಆಯ್ಕೆಗೊಂಡರು.

ಮಹಿಳಾ ವಿಭಾಗದ ಅಧ್ಯಕ್ಷರಾಗಿ ಸುಜಾತಾ ನಾಯರ್‌, ಕಾರ್ಯದರ್ಶಿಯಾಗಿ ಶ್ರೀಜಾ ನಂಬಿಯಾರ್‌, ಹಾಗೂ ಖಜಾಂಚಿಯಾಗಿ ಗೋಪಿಕಾ ರಾಣಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಪ್ರಭಾ ವಿಜಯಕುಮಾರ್‌, ಜತೆಕಾರ್ಯದರ್ಶಿಯಾಗಿ ಅನಿತಾ ಜಯಚಂದ್ರನ್‌ ಆಯ್ಕೆಯಾಗಿದ್ದಾರೆ.

error: Content is protected !!