ಡೇಟ್‌ಗೆ ಕರೆದ ಫೋಟೋಗ್ರಾಫರ್’ ವಿರುದ್ಧ ಸಿಡಿದೆದ್ದ ತನಿಷಾ ಕುಪ್ಪಂಡ

“ಕನ್ನಡ ಬಿಗ್ ಬಾಸ್ ಸೀಸನ್ 10” ಖ್ಯಾತಿಯ ಸ್ಪರ್ಧಿ ಹಾಗೂ ನಟಿ ತನಿಷಾ ಕುಪ್ಪಂಡ ಅವರು ತಮ್ಮೊಂದಿಗೆ ಅಸಭ್ಯವಾಗಿ ನಡೆದುಕೊಂಡವರ ವಿರುದ್ಧ ಸಿಡಿದೆದ್ದಿದ್ದಾರೆ. ಇತ್ತೀಚೆಗೆ ಚಿತ್ರರಂಗದ ನಟಿಯರನ್ನು ಟಾರ್ಗೆಟ್ ಮಾಡುತ್ತಿರುವ ಕಿಡಿಗೇಡಿಗಳಿಗೆ ತಮ್ಮದೇ ಶೈಲಿಯಲ್ಲಿ ಖಡಕ್ ಎಚ್ಚರಿಕೆ ನೀಡಿರುವ ತನಿಷಾ, “ಯಾರೂ ಕೂಡ ನನ್ನ ತಾಳ್ಮೆಯನ್ನು ಪರೀಕ್ಷಿಸಲು ಬರಬೇಡಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ನಟಿ ರುಕ್ಮಿಣಿ ವಸಂತ್ ಅವರ ಹೆಸರಿನಲ್ಲಿ ನಕಲಿ ಬಿಕಿನಿ ವಿಡಿಯೋಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಈ ಘಟನೆಯ ಬೆನ್ನಲ್ಲೇ ತನಿಷಾ ಕುಪ್ಪಂಡ ಅವರು ಮಾಡಿರುವ ಇನ್ಸ್ಟಾಗ್ರಾಮ್ ಪೋಸ್ಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇಂಟರ್ನೆಟ್ ಲೋಕದಲ್ಲಿ ಸೆಲೆಬ್ರಿಟಿಗಳ, ವಿಶೇಷವಾಗಿ ಮಹಿಳಾ ನಟಿಯರ ತೇಜೋವಧೆ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ತನಿಷಾ ತೀವ್ರವಾಗಿ ಗರಂ ಆಗಿದ್ದಾರೆ.

ತನಿಷಾ ಅವರು ತಮ್ಮ ಸ್ಟೇಟಸ್‌ನಲ್ಲಿ, ಕೆಲವು ಕೆಟ್ಟ ಫೋಟೋಗ್ರಾಫರ್​​ಗಳು ಬಂದು ಕಲಾವಿದರ ಬಳಿ ನಾನ್​ಸೆನ್ಸ್​ ಮಾತನಾಡುತ್ತಾರೆ. ಫೋಟೋಶೂಟ್ ಮಾಡುವ ಯೋಗ್ಯತೆ ಇಲ್ಲ ಅಂದರೆ ಕೇಳಬಾರದು. ನಿಮ್ಮಂತ ತರ್ಡ್​ ಕ್ಲಾಸ್ ಫೋಟೋಗ್ರಾಫರ್​​ಗಳಿಂದ ಬೇರೆ ಛಾಯಾಗ್ರಹಕರಿಗೆ ಅವಮಾನ’ ಎಂದು ತನಿಷಾ ಹೇಳಿದ್ದಾರೆ. ಅನಿಲ್ ಕುಮಾರ್ ಎಂಬ ಛಾಯಾಗ್ರಾಹಕ ಫೋಟೋಗ್ರಾಫಿ ಹೆಸರಲ್ಲಿ ಡೇಟ್‌ಗೆ ಕರೆದಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲೂ ತಮ್ಮ ನೇರ ನಡೆ ಹಾಗೂ ಬೋಲ್ಡ್ ಸ್ವಭಾವದಿಂದ ಗುರುತಿಸಿಕೊಂಡಿದ್ದ ತನಿಷಾ, ಈಗ ಸಾಮಾಜಿಕ ಮಾಧ್ಯಮ ಕಿರುಕುಳದ ವಿರುದ್ಧವೂ ಧ್ವನಿ ಎತ್ತಿರುವುದಕ್ಕೆ ಅಭಿಮಾನಿಗಳಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.

ಈ ಜಾಲಕ್ಕೆ ಬ್ರೇಕ್ ಬೀಳಲೇಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಆದರೆ ಕಿಡಿಗೇಡಿಗಳಿಗೆ ತನಿಷಾ ನೀಡಿರುವ ಈ ಖಡಕ್ ಸಂದೇಶ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.

error: Content is protected !!