ಕ್ಷುಲ್ಲಕ ವಿಚಾರಕ್ಕೆ ವಾಟ್ಸಾಪ್ ಗ್ರೂಪ್‌ನಲ್ಲಿ ಜಗಳ; ವಿದ್ಯಾರ್ಥಿ ಮೇಲೆ ಹಲ್ಲೆ, 6 ಮಂದಿ ಬಂಧನ

ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ವಾಟ್ಸಾಪ್‌ ಗ್ರೂಪ್‌ನಲ್ಲಿ ಜಗಳ ಮಾಡಿಕೊಂಡ ಯುವಕರ ಗುಂಪೊಂದು ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿರುವ ಘಟನೆ ಸಂಜಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, 6 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ

ಮತೀನ್‌, ಜಯಕಾಂತನ್‌, ಶ್ರೇಯಸ್‌, ಕಿಶೋರ್‌, ಪವನ್‌ ಹಾಗೂ ಶೈಲೆಂದರ್‌ ಬಂಧಿತರು.

ಜಿಮ್‌ ತರಬೇತುದಾರ ಮತೀನ್‌ ತನ್ನ ಸಹಚರರೊಂದಿಗೆ ಮೇ 19ರಂದು ಅನುಶ್‌ ಠಾಕೂರ್‌ಎಂಬ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ನಂತರ ಅನುಶ್‌ ಠಾಕೂರ್‌ ಕುಟುಂಬದವರ ದೂರಿನ ಮೇರೆಗೆ ಕೇಸ್‌ ದಾಖಲಾಗಿದ್ದು, ಆರೋಪಿಗಳ ಬಂಧಿಸಲಾಗಿದೆ.

ಅನುಶ್‌ ಠಾಕೂರ್‌ ಇಲಿಯಾಸ್‌ ಎಂಬಾತನ ಬಳಿ ಜಿಮ್‌ನಲ್ಲಿ ಟ್ರೆನರ್‌ ತರಬೇತಿ ಪಡೆದುಕೊಂಡಿದ್ದ. 6 ತಿಂಗಳಿಂದ ಜೀಮ್‌ಗೆ ಹೋಗುತ್ತಿರಲಿಲ್ಲ. ಮೇ 18ರಂದು ಗ್ರೂಪ್‌ನಲ್ಲಿ ಜಗಳವಾಗಿದೆ. ಇಲಿಯಾಸ್‌ ಶಿಷ್ಯ ಮತೀನ್‌, ಅನುಶ್‌ ಕರೆ ಮಾಡಿ, ಗುರುಗಳಿಗೆ ಬೆದರಿಕೆ ಹಾಕುತ್ತೀಯಾ ಎಂದು ಪ್ರಶ್ನಿಸಿದ್ದಾನೆ. ಬಳಿಕ ಮೇ 19ರಂದು ಮನೆ ಬಳಿ ನಾಲ್ಕೈದು ಮಂದಿ ಸಹಚರರನ್ನು ಕರೆತಂದು ಅನುಶ್‌ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

error: Content is protected !!