ಇಂಡಿಯಾನಾ ಆಸ್ಪತ್ರೆಯಲ್ಲಿ ಮೇ 4ರಿಂದ ಉಚಿತ ಅಸ್ತಮಾ ತಪಾಸಣಾ ಸಪ್ತಾಹ

ಮಂಗಳೂರು: ವಿಶ್ವ ಅಸ್ತಮಾ ದಿನದ (ಮೇ 5, 2026) ಅಂಗವಾಗಿ ನಗರದ ಇಂಡಿಯಾನಾ ಹಾಸ್ಪಿಟಲ್ ಅಂಡ್ ಹಾರ್ಟ್ ಇನ್‌ಸ್ಟಿಟ್ಯೂಟ್ ವತಿಯಿಂದ ಮೇ 4ರಿಂದ ಮೇ 9ರವರೆಗೆ ‘ಉಚಿತ ಅಸ್ತಮಾ ತಪಾಸಣಾ ಸಪ್ತಾಹ’ವನ್ನು ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಕನ್ಸಲ್ಟೆಂಟ್ ಪಲ್ಮನಾಲಜಿಸ್ಟ್ ಡಾ. ಕೀರ್ತನ್ ಗಣಪತಿ ಹೇಳಿದರು.

ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರಲ್ಲಿ ಅಸ್ತಮಾ ಉಂಟಾಗುವ ಕಾರಣಗಳನ್ನು ಗುರುತಿಸುವುದು ಮತ್ತು ಇನ್ಹೇಲರ್‌ಗಳನ್ನು ಸರಿಯಾಗಿ ಬಳಸುವ ಬಗ್ಗೆ ಜಾಗೃತಿ ಮೂಡಿಸುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ. ಈ ವಿಶೇಷ ಸಪ್ತಾಹದ ಅವಧಿಯಲ್ಲಿ ಪಲ್ಮನಾಲಜಿಸ್ಟ್‌ಗಳೊಂದಿಗೆ ಸಮಾಲೋಚನೆಯು ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಅಲ್ಲದೆ, ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಅಳೆಯುವ ಸ್ಪೈರೋಮೆಟ್ರಿ ಪರೀಕ್ಷೆಯ ಅಗತ್ಯವಿದ್ದಲ್ಲಿ ಅಂತಹ ರೋಗಿಗಳಿಗೆ ಶೇ. 50ರಷ್ಟು ರಿಯಾಯಿತಿ ನೀಡಲಾಗುವುದು. ಅಸ್ತಮಾ ರೋಗಿಗಳು ತಮ್ಮ ಕಾಯಿಲೆಯ ಟ್ರಿಗರ್‌ಗಳನ್ನು ಗುರುತಿಸುವುದು ಮತ್ತು ಸರಿಯಾದ ಚಿಕಿತ್ಸಾ ಯೋಜನೆಯನ್ನು ಹೊಂದುವುದು ಈ ಮೂಲಕ ಸಾಧ್ಯವಾಗಲಿದೆ ಎಂದರು.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ⬇️

ಆಸ್ಪತ್ರೆಯ ಪಲ್ಮನಾಲಜಿ ವಿಭಾಗವು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದ್ದು, ಸಾಮಾನ್ಯ ಸ್ಪೈರೋಮೆಟ್ರಿಯಿಂದ ಪತ್ತೆಹಚ್ಚಲಾಗದ ಪ್ರಕರಣಗಳನ್ನು ಗುರುತಿಸಲು ಎಫ್‌ಒಟಿ (Forced Oscillation Technique), ಫಿನೋ (Fractional Exhaled Nitric Oxide) ಮತ್ತು ಸ್ಕಿನ್ ಪ್ರಿಕಿಂಗ್ ಟೆಸ್ಟ್ (SPT) ನಂತಹ ಪರೀಕ್ಷೆಗಳು ಇಲ್ಲಿ ಲಭ್ಯವಿವೆ. ಉಸಿರಾಟದ ತೊಂದರೆ, ನಿರಂತರ ಕೆಮ್ಮು ಅಥವಾ ಅಲರ್ಜಿ ಸಮಸ್ಯೆ ಇರುವವರು ಹಾಗೂ ಧೂಮಪಾನಿಗಳು ಈ ಶಿಬಿರದ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.

ಆಸಕ್ತ ಸಾರ್ವಜನಿಕರು ಈ ಶಿಬಿರದಲ್ಲಿ ಭಾಗವಹಿಸಲು ಮುಂಗಡವಾಗಿ ಅಪಾಯಿಂಟ್‌ಮೆಂಟ್ ಪಡೆಯುವುದು ಅಗತ್ಯವಾಗಿದ್ದು, 6361687385 ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳುವಂತೆ ವಿನಂತಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಎಡ್ವಿನ್ ಡಿಸೋಜ ಅವರು ಉಪಸ್ಥಿತರಿದ್ದರು.

error: Content is protected !!