
ಚೆನ್ನೈ: ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ವ್ಯತ್ಯಯವಾಗಿರುವುದರಿಂದ ಸಾವಿರಾರು ಮಂದಿ ಮಾರ್ಗಮಧ್ಯದಲ್ಲಿ ಸಿಲುಕಿಕೊಂಡಿದ್ದು, ಮತದಾನದ ಅವಧಿಯನ್ನು 8 ಗಂಟೆಯವರೆಗೂ ವಿಸ್ತರಿಸಬೇಕೆಂದು ಇಂದು(ಏ.23) ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ವಿಜಯ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ
ತಮಿಳುನಾಡು ಮುಖ್ಯ ಚುನಾವಣಾಧಿಕಾರಿ ಅರ್ಚನಾ ಪಟ್ನಾಯಕ್ ಗೆ ಪತ್ರ ಬರೆದಿರುವ ವಿಜಯ್, ಜನರು ತಮ್ಮ ನಿಯೋಜಿತ ಮತಗಟ್ವೆಗಳನ್ನು ತಲುಪಲು ಯಾವುದೇ ಬಸ್‌ಗಳಿಲ್ಲದೆ ಇರುವುದರಿಂದ ಅಥವಾ ಪರ್ಯಾಯ ಸಾರ್ವಜನಿಕ ಸಾರಿಗೆ ಲಭ್ಯವಿಲ್ಲದೆ ಇರುವುದರಿಂದ ಸಾವಿರಾರು ಮಂದಿ ಮತದಾರರು ಚೆನ್ನೈ ಟರ್ಮಿನಲ್‌ಗಳಲ್ಲಿ ಹಾಗೂ ಇನ್ನಿತರ ಮೆಟ್ರೊ ನಗರಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದಿದ್ದಾರೆ.
