ಚಿಕನ್‌ ಪ್ರಿಯರೇ ಎಚ್ಚರ…ರಾಜ್ಯಕ್ಕೆ ಕಾಲಿಟ್ಟಿದೆ H5N1 ಹಕ್ಕಿ ಜ್ವರ!!

ಬೆಂಗಳೂರು: ನಗರದ ಹೆಸರಘಟ್ಟದಲ್ಲಿರುವ ರಾಜ್ಯ ಸರ್ಕಾರದ ಅಧೀನದಲ್ಲಿರುವ ಪೌಲ್ಟ್ರಿ ಫಾರಂನಲ್ಲಿ H5N1 ವೈರಸ್ ಪತ್ತೆಯಾಗಿದ್ದು, ತಕ್ಷಣವೇ ಫಾರಂ ಅನ್ನು ಮುಚ್ಚಲಾಗಿದ್ದು, ಫಾರಂನಲ್ಲಿರುವ ಕೋಳಿಗಳನ್ನ ಗುಂಡಿ ತೆಗೆದು ಮುಚ್ಚಿದ್ದಾರೆ ಎನ್ನಲಾಗ್ತಿದೆ.

ಈ ಫಾರಂನಿಂದ ರಾಜ್ಯದ ನಾನಾ ಭಾಗಗಳಿಗೆ ಕೋಳಿ ಸಪ್ಲೈ ಮಾಡಲಾಗುತ್ತಿತ್ತು. ಹೀಗಾಗಿ ಪೌಲ್ಟ್ರಿ ಫಾರಂನಲ್ಲಿ ತಪಾಸಣೆ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ. ಕೋಳಿ ಸಾಕಾಣೆಗಾರರನ್ನ ವೈದ್ಯಾಧಿಕಾರಿಗಳು ಕ್ವಾರಂಟೈನ್ ಮಾಡಿದ್ದು, ಸರ್ಕಾರದ ಪಶು ವೈದ್ಯಾಧಿಕಾರಿಗಳು ಸುತ್ತಮುತ್ತಲಿನ ಪಂಚಾಯಿತಿಗಳಿಗೂ ನೋಟಿಸ್ ನೀಡಿದೆ.

error: Content is protected !!