
ಆಂಧ್ರಪ್ರದೇಶ : ಮಂತ್ರಾಲಯಕ್ಕೆ ಹೋಗುತ್ತಿದ್ದ ಬುಲೆರೋ ವಾಹನಕ್ಕೆ ಬೀದರ್‌ನಿಂದ ತುಮಕೂರಿಗೆ ಹೋಗುತ್ತಿದ್ದ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 8 ಮಂದಿ ಸಾವನ್ನಪ್ಪಿರುವ ಘಟನೆ ಇಂದು(ಏ.16) ಜಾವ 4 ಗಂಟೆ ಸುಮಾರಿಗೆ ಆಂಧ್ರದ ಮಂತ್ರಾಲಯ ಬಳಿಯ ಚಿಲಕನಡೋಣ ಬಳಿ ನಡೆದಿದೆ.

ಚಿಕ್ಕಮಗಳೂರು ಮೂಲದ ಅಮೃತ, ತೇಜಶ್ವಿನಿ, ಧನ್ಯ, ದೀಪಿಕ, ದಿಕ್ಷಿತ, ಪ್ರತಾಪ್, ಕುಮಾರ್, ಯಶೋದಮ್ಮ ಮೃತರು.

ರಾಯರ ದರ್ಶನಕ್ಕಾಗಿ ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ಬುಲೆರೋ ವಾಹನಕ್ಕೆ ಸಿಮೆಂಟ್ ಟ್ಯಾಂಕರ್ ಡಿಕ್ಕಿಯಾಗಿ ಮೂರು ವರ್ಷದ ಮಗು ಸೇರಿ ಐವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸಾವನ್ನಪ್ಪಿದ್ದಾರೆ.
ಗಾಯಾಳುಗಳನ್ನು ಕರ್ನೂಲು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.