sಉಡುಪಿ: ಕೆಲಸ ಮುಗಿಸಿ ರಾತ್ರಿ ಮನೆಗೆ ಬಂದ ವ್ಯಕ್ತಿಯೋರ್ವರು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬ್ರಹ್ಮಾವರ ತಾಲ್ಲೂಕಿನ ಮೂಡಹಡು ಗ್ರಾಮದಲ್ಲಿ ನಡೆದಿದೆ.

ಬ್ರಹ್ಮಾವರದ ಮೂಡಹಡು ಗ್ರಾಮದ ನಿವಾಸಿ ಗಣೇಶ ಮೆಂಡನ್(38) ಮೃತ ವ್ಯಕ್ತಿ.
ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದ ಗಣೇಶ ಮೆಂಡನ್ ಎಪ್ರಿಲ್ 4ರಂದು ಕೆಲಸದ ನಿಮಿತ್ತ ಕೊಮೆ ಬೀಚ್‌ಗೆ ತೆರಳಿದ್ದರು. ಅಲ್ಲಿ ಫೋಟೋ ಶೂಟ್ ಮುಗಿಸಿಕೊಂಡು ಸುಮಾರು ರಾತ್ರಿ 11:00 ಗಂಟೆಗೆ ಮನೆಗೆ ವಾಪಸ್ಸಾಗಿದ್ದರು. ಮನೆಯಲ್ಲಿ ಎಲ್ಲರೊಂದಿಗೂ ಇದ್ದ ಅವರು, ಬೆಳಕು ಹರಿಯುವ ಮೊದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗಣೇಶ ಅವರ ಪತ್ನಿ ಅಕ್ಷತಾ (34) ಅವರು ಏಪ್ರಿಲ್ 5ರ ಬೆಳಗಿನ ಜಾವ ಸುಮಾರು 3:00 ಗಂಟೆಗೆ ಎದ್ದು ನೋಡಿದಾಗ ಈ ಭೀಕರ ದೃಶ್ಯ ಬೆಳಕಿಗೆ ಬಂದಿದೆ. ಗಣೇಶ ಅವರು ಫ್ಯಾನ್ ಹುಕ್ಕಿಗೆ ಸೀರೆಯನ್ನು ಕುತ್ತಿಗೆಗೆ ಸುತ್ತಿ, ನಂತರ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಕ್ಷಣವೇ ಕುಟುಂಬಸ್ಥರು ಮತ್ತು ನೆರೆಹೊರೆಯವರು ಗಮನಿಸಿದರೂ ಗಣೇಶ ಅವರು ಅದಾಗಲೇ ಮೃತಪಟ್ಟಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಮೃತರ ಪತ್ನಿ ಅಕ್ಷತಾ ಅವರು ನೀಡಿದ ದೂರಿನ ಮೇರೆಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಆತ್ಮಹತ್ಯೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
