
ಸುರತ್ಕಲ್ : ವೀರಕೇಸರಿ (ರಿ) ತಡಂಬೈಲ್ ಇದರ ವಾರ್ಷಿಕೋತ್ಸವ ಇತ್ತೀಚೆಗೆ ಮಾರಿಗುಡಿ ತಡಂಬೈಲ್ ಗುತ್ತು ಬಾಕಿಮಾರ್ ಗದ್ದೆಯಲ್ಲಿ ನಡೆಯಿತು.

ಸಮಾರಂಭವನ್ನು ಶಾಸಕರಾದ ಡಾ ವೈ ಭರತ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ವೀರಕೇಸರಿ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ಸಮಾಜ ಸೇವೆ ಸಾಂಸ್ಕೃತಿಕ, ಕ್ರೀಡೆ ಮೊದಲಾದ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬಂದಿದೆ ಎಂದರು.

ಸಮಾರಂಭದಲ್ಲಿ ಚಂದ್ರ ಶೇಖರ್ ನಾನಿಲ್, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿಯ ಅಧ್ಯಕ್ಷ ಅಶೋಕ್ ಶೆಟ್ಟಿ ಸುರತ್ಕಲ್, ಚಲನಚಿತ್ರ ನಟ ಶನಿಲ್ ಗುರು, ಸತೀಶ್ ಮುಂಚೂರು, ಗಣೇಶ್ ಶೆಟ್ಟಿ, ಕಿರಣ್ ಶೆಟ್ಟಿ, ಜಯೇಶ್ ಗೋವಿಂದ, ಮಹಾಬಲ ಪೂಜಾರಿ ಕಡಂಬೋಡಿ, ವೀರಕೇಸರಿ ಸಂಸ್ಥೆಯ ಅಧ್ಯಕ್ಷ ಎಸ್ ಪದ್ಮನಾಭ ಕರ್ಕೇರ, ಸುಧಾಕರ್ ಸುರತ್ಕಲ್, ಕೈಲಾಸ್ ತಡಂಬೈಲ್, ಸುಕುಮಾರ್ ತಡಂಬೈಲ್ ಉಪಸ್ಥಿತರಿದ್ದರು.

ಕಾರ್ತಿಕ್ ಕುಲಾಲ್, ರಾಮಚಂದ್ರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸುಧಾಕರ್ ಕೆ ಸುರತ್ಕಲ್ ವಂದಿಸಿದರು. ಬಳಿಕ ಚಾಪರ್ಕ ತಂಡದಿಂದ ಯಾನೊರಿ ಬರೊಲಿಯ ನಾಟಕ ಪ್ರದರ್ಶನಗೊಂಡಿತು.