ಸುರತ್ಕಲ್: 2025-26ನೇ ಸಾಲಿನ ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ಆದೀನದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಪಬ್ಲಿಕ್ ಪರೀಕ್ಷೆಯಲ್ಲಿ ಅಲ್ ಮದರಸತುಲ್ ಬದ್ರಿಯಾ 6th ಬ್ಲಾಕ್ ಕೃಷ್ಣಾಪುರ ಮದರಸ ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಶೇಕಡಾ ನೂರು ಫಲಿತಾಂಶ ತಂದಿದ್ದಾರೆ.

ಪರೀಕ್ಷೆ ಬರೆದ ಒಟ್ಟು 99 ವಿದ್ಯಾರ್ಥಿಗಳಲ್ಲಿ 7ನೇ ತರಗತಿಯಲ್ಲಿ ಒಂದು ಟಾಪರ್, 9 ಡಿಸ್ಟಿಂಕ್ಷನ್, 5ನೇ ತರಗತಿಯಲ್ಲಿ ಒಂದು ಟಾಪರ್, 3 ಡಿಸ್ಟಿಂಕ್ಷನ್ ಗ್ರೇಡ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.

7ನೇ ತರಗತಿಯಲ್ಲಿ ಫಾತಿಮಾ ಸನಾ(579) 5ನೇ ತರಗತಿಯಲ್ಲಿ ರಫಾ ಮರಿಯಮ್ (591) ಪೂರ್ತಿ ಅಂಕ ಪಡೆದು ಟಾಪರ್ ಗಳಾಗಿದ್ದು, ಫಾತಿಮಾ ಶಾಹಿಫಾ(541) ಖದೀಜಾ ರಿಲಾ(537) ಜವ್ನಾ ನೂರ್ ಜಹಾನ್(529) ಸಬೀಹಾ ಫಾತಿಮಾ(529) ಹಯಾ ಫಾತಿಮಾ(518) ಆಯಿಷತ್ ರಿಫಾ(504) ಫಾತಿಮತ್ ರಿಫಾತ್(489) ಮುಹಮ್ಮದ್ ಕೈಸರ್ (494) ಹುಸೈನ್ ಸಹಲ್(481) 5ನೇ ತರಗತಿಯಲ್ಲಿ ಅನಸ್ ಇಮ್ರಾನ್(532) ಮುಹಮ್ಮದ್ ರಿಹಾನ್(518) ಜುಝ್ ಲ ಫಾತಿಮಾ(504) ಉನ್ನತ ಅಂಕದೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.

ವಿದ್ಯಾರ್ಥಿಗಳಿಗೆ ಪ್ರದಾನ ಅಧ್ಯಾಪಕರಾದ ಸೈಫುಲ್ಲಾ ಸಖಾಫಿ ಬಡಕಬೈಲ್, 7ನೇ ತರಗತಿ ಅಧ್ಯಾಪಕರಾದ ಮುಜ್ತಬ ಫಾಲಿಳಿ ಉಪ್ಪಿನಂಗಡಿ, 5ನೇ ತರಗತಿ ಅಧ್ಯಾಪಕರಾದ ಮುಸ್ತಾಫ ಸಹದಿ ಮಲ್ಲಿ ಮತ್ತು ಮುಸ್ತಾಫ ಫಾಲಿಳಿ, ಚೊಕ್ಕಬೆಟ್ಟುರವರನ್ನು ತೈಬಾ ಜುಮಾ ಮಸೀದಿಯ ಆಡಳಿತ ಸಮಿತಿ ಹಾಗೂ ಪೋಷಕ ಮಂಡಳಿ ಅಭಿನಂದಿಸಿದೆ.