ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಿ.ಎ.ಎಸ್.ಎಪ್ ಸಂಸ್ಥೆಯಿಂದ ನೀರಿನ ಘಟಕದ ನಿರ್ಮಾಣ

ಮಂಗಳೂರು: ಸಮುದಾಯ ಅಭಿವೃದ್ಧಿ ಯೋಜನೆಯಡಿ ನಡೆಸುವ ಕಾರ್ಯಕ್ರಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಬಹಳಷ್ಟು ಪ್ರಮುಖ್ಯತೆ ನೀಡಲಾಗಿದೆ ಎಂದು ಬಿ.ಎ.ಎಸ್.ಎಪ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಪ್ರಭಂದಕರಾದ ಸಂತೋಷ್ ಪೈ ನುಡಿದರು.

ಸೂರಿಂಜೆ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಿ.ಎ.ಎಸ್ ಎಪ್ ಸಂಸ್ಥೆಯ ವತಿಯಿಂದ ಸುಮಾರು‌1 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಿದ್ದು ಅದರ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಂತೋಷ್ ಪೈ ಅವರು, ನಮ್ಮ ಸಂಸ್ಥೆಯು ಆದ್ಯತೆ ನೆಲೆಯಲ್ಲಿ ಪರಿಸರದ ಸುತ್ತಲಿನ ಗ್ರಾಮಗಳ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಅದ್ಯತೆ ನೀಡಲಾಗಿದೆ ಎಂದರು.

ಪೊನ್ನಗಿರಿ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀನಿವಾಸ ಅಸ್ರಣ್ಣ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಗನ್ನಾಥ ಶೆಟ್ಟಿ ತೇವು, ಮುಂಬಯಿ ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ, ಮನೋಹರ ಶೆಟ್ಟಿ ಸೂರಿಂಜೆ, ಧನಂಜಯ ಶೆಟ್ಟಿ ಬೊಳ್ಳಾರುಗುತ್ತು, ಜಯಶೀಲ ಸೂರಿಂಜೆ, ಚೇಳೈರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಬಿ.ಎ.ಎಸ್.ಎಪ್ ಸಂಸ್ಥೆಯ ಪ್ರಭಂದಕರಾದ ಪ್ರವೀಣ್ ಶೆಟ್ಟಿ, ಸುರತ್ಕಲ್ ಜೆಸಿಐ ಅಧ್ಯಕ್ಷ ಅಶೋಕ್ ಎನ್,ಪೂರ್ವಧ್ಯಕ್ಷೆ ಜ್ಯೋತಿ ಪಿ ಶೆಟ್ಟಿ, ಉಪಾಧ್ಯಕ್ಷೆ ಸವಿತಾ ಶೆಟ್ಟಿ, ಪ್ರಾರ್ಥನಾ,ಸುಜೀರ್ ಶೆಟ್ಟಿ ಸೂರಿಂಜೆ, ಶಶಿಕುಮಾರ್ ಶೆಟ್ಟಿ,ಕೇಸರಿ ಮನೋಹರ ಶೆಟ್ಟಿ ಸೂರಿಂಜೆ, ಶ್ವೇತಾ ಶೆಟ್ಟಿ ತೇವು ಮುಂತಾದವರು ಉಪಸ್ಥಿತರಿದ್ದರು.

error: Content is protected !!