ಮಲ್ಪೆ: ಪಾಕಿಸ್ತಾನಕ್ಕೆ ನೇವಿಯ ರಹಸ್ಯ ರವಾನಿಸುತ್ತಿದ್ದ ʻಬಂಗಾಳಿ ಬಾಬುʼ ಗೆಟಪಲ್ಲಿದ್ದ ʻಆಲಿಫ್ ಇಸ್ಲಾಂʼ ಸೆರೆ

ಉಡುಪಿ: ಈ ದೇಶ ಎಷ್ಟು ಉದಾರಿ ಅಂದರೆ ಇಲ್ಲಿ ಯಾರು ಬೇಕಾದರೂ ಬರಬಹುದು, ಬದುಕು ಕಟ್ಟಿಕೊಳ್ಳಬಹುದು. ಆದರೆ ಅದೇ ಉದಾರತೆಯ ಎದೆಗೆ ಚೂರಿ ಹಾಕುವ ಕೆಲಸವನ್ನೇ ಈ ಆಲಿಫ್ ಇಸ್ಲಾಂ ಮಾಡಿದ್ದಾನೆ ಉಡುಪಿ ಪೊಲೀಸರ ತನಿಖೆಯಿಂದ ಬಟಾಬಯಲಾಗಿದೆ.

ಉಡುಪಿಯ ಮಲ್ಪೆ ಬಂದರಿನಲ್ಲಿ ಕುಳಿತು ನಮ್ಮ ನೌಕಾಪಡೆಯ (Indian Navy) ರಹಸ್ಯಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ದೇಶದ್ರೋಹಿಗಳ ತಂಡಕ್ಕೆ ಈಗ ನಡುಕ ಶುರುವಾಗಿದೆ. ಯಾಕೆಂದರೆ, ಪೊಲೀಸರು ಈಗ ನಾಲ್ಕನೇ ಇಲಿಯನ್ನು ಬಿಲದಿಂದ ಹೊರಗೆಳೆದಿದ್ದಾರೆ. ಅವನ ಹೆಸರೇ ಆಲಿಫ್ ಇಸ್ಲಾಂ. ಕೇವಲ 21 ವರ್ಷದ ಈ ಪೋರ, ಕೇರಳದ ಇಡುಕ್ಕಿಯ ಮರಾಯು ಗ್ರಾಮದಲ್ಲಿ ಸದ್ದಿಲ್ಲದೆ ಅಡಗಿ ಕುಳಿತು ಮಲೆಯಾಳಿಗಳ ಮಧ್ಯೆ ಒಬ್ಬನಾಗಿ ಬೆರೆತು ಹೋಗಿದ್ದ.

ಬಂಗಾಳದವನೆಂಬ ನಾಟಕ… ಬಾಂಗ್ಲಾದೇಶದವನೆಂಬ ಶಂಕೆ!
ಈ ಆಲಿಫ್ ತನ್ನನ್ನು ತಾನು ಪಶ್ಚಿಮ ಬಂಗಾಳದವನು ಅಂತ ಗುರುತಿಸಿಕೊಂಡಿದ್ದ. ಆದರೆ, ಉಡುಪಿ ಪೊಲೀಸರ ಹದ್ದಿನ ಕಣ್ಣಿಗೆ ಇವನ ಮಾತು, ನಡವಳಿಕೆ ಮತ್ತು ಇವನ ಬಳಿ ಇದ್ದ ದಾಖಲೆಗಳು ಡೌಟು ಹುಟ್ಟಿಸಿವೆ. ಇವನು ನಮ್ಮ ದೇಶದ ಬಂಗಾಳದವನಲ್ಲ, ಬದಲಾಗಿ ಗಡಿ ದಾಟಿ ಬಂದ ಬಾಂಗ್ಲಾದೇಶದ ಪ್ರಜೆ ಇರಬಹುದು ಎಂಬ ಬಲವಾದ ಅನುಮಾನ ಪೊಲೀಸರನ್ನು ಕಾಡುತ್ತಿದೆ. ಆ ಗಡಿಯಿಂದ ಸದ್ದಿಲ್ಲದೆ ನುಸುಳಿ ಬಂದು, ಮಲ್ಪೆಯ ಶಿಪ್ ಯಾರ್ಡ್ ಒಳಗೆ ಇವನು ಸೇರಿಕೊಂಡಿದ್ದು ಹೇಗೆ? ಇವನಿಗೆ ಆಧಾರ್ ಕಾರ್ಡ್ ಕೊಟ್ಟವರು ಯಾರು? ಇವನ ಅಸಲಿ ಜನ್ಮ ರಹಸ್ಯ ಎಲ್ಲಿದೆ ಎಂಬುದು ಈಗ ತನಿಖೆಯ ಕೇಂದ್ರಬಿಂದು.

ಒಂದೂವರೆ ವರ್ಷದಿಂದ ನಡೆದ ʻನೇವಿಕ’ ರಹಸ್ಯದ ಹರಾಜು!
ನಮ್ಮ ನೌಕಾಪಡೆಯ ಹಡಗುಗಳ ಫೋಟೋ, ಅವುಗಳ ತಾಂತ್ರಿಕ ವಿವರಗಳನ್ನು ವಾಟ್ಸ್ ಆ್ಯಪ್ ಮೂಲಕ ಪಾಕಿಸ್ತಾನದ ಏಜೆಂಟ್‌ಗಳಿಗೆ ಕಳುಹಿಸುತ್ತಿದ್ದ ಈತ, ಕೇವಲ ಒಂದಷ್ಟು ಕಾಸಿಗಾಗಿ ದೇಶವನ್ನೇ ಅಡವಿಟ್ಟಿದ್ದನಾ? ಈಗಾಗಲೇ ಯುಪಿಯ ರೋಹಿತ್, ಗುಜರಾತ್‌ನ ಹಿರೇಂದ್ರ ಕುಮಾರ್ ಅಂದರ್ ಆಗಿದ್ದಾರೆ. ಇವರೆಲ್ಲರ ಮಧ್ಯೆ ಈ ಬಾಂಗ್ಲಾ ಮೂಲದವನೆನ್ನಲಾದ ಆಲಿಫ್ ಹೇಗೆ ಕನೆಕ್ಟ್ ಆದ ಎನ್ನುವ ಬಗ್ಗೆ ಪೊಲೀಸರು ತನಿಖೆಗಿಳಿದಿದ್ದಾರೆ.

ಈತ ಕೇರಳದ ಮಲೆಯಾಳಿಗಳ ಮಧ್ಯೆ ಒಬ್ಬನಾಗಿ ಬೆರೆತು ಹೋಗಿದ್ದ. ಆದರೆ ಪಾಪದ ಕೊಡ ತುಂಬಿದಾಗ ಸುಮ್ಮನೆ ಇರುತ್ತದೆಯೇ? ಉಡುಪಿ ಪೊಲೀಸರು ಕೇರಳಕ್ಕೆ ಹೋಗಿ ಈತನ ಕಾಲರ್ ಹಿಡಿದು ಎಳೆದು ತಂದಿದ್ದಾರೆ. ಇವನ ಅಸಲಿ ಪೌರತ್ವದ ಬಣ್ಣ ಬಯಲಾದರೆ, ಈ ದೇಶದ್ರೋಹದ ಜಾಲ ಎಲ್ಲಿಯವರೆಗೆ ಹಬ್ಬಿದೆ ಅನ್ನೋದು ಜಗತ್ತಿಗೆ ಗೊತ್ತಾಗಲಿದೆ.

ಮಲ್ಪೆಯ ಕಡಲತೀರದಲ್ಲಿ ಈಗ ಕೇವಲ ಅಲೆಗಳ ಸದ್ದಿಲ್ಲ, ಬದಲಾಗಿ ನಮ್ಮ ಭದ್ರತೆಯ ಬುಡಕ್ಕೆ ಬೆಂಕಿ ಇಡುತ್ತಿರುವ ಇಂತಹ ʻನುಸುಳುಕೋರ’ರ ವಿರುದ್ಧದ ಆಕ್ರೋಶ ಮೊಳಗುತ್ತಿದೆ. ಬಾಂಗ್ಲಾದೇಶಿಗರನ್ನು ಹುಡುಕಿ ಹುಡುಕಿ ದೇಶದಿಂದ ಅಟ್ಟಬೇಕಾದ ತುರ್ತು ಕಾರ್ಯ ನಡೆಯಬೇಕಾಗಿದೆ ಎಂಬ ಆಗ್ರಹ ಕೇಳಿಬಂದಿದೆ.

error: Content is protected !!