ಸುರತ್ಕಲ್: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ವೃದ್ಧ ಅರೆಸ್ಟ್!

ಸುರತ್ಕಲ್: ಪೊಲೀಸ್ ಠಾಣಾ ವ್ಯಾಪ್ತಿಯ ಚೇಳಾಯರು ಎಂಬಲ್ಲಿ 14ರ ಹರೆಯದ ಅಪ್ರಾಪ್ತ ಬಾಲಕಿಗೆ ಲೈಂಗಿಕ‌ ಕಿರುಕುಳ ನೀಡಿದ್ದ ಆರೋಪಿ ವೃದ್ಧನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತನನ್ನು ಸುರತ್ಕಲ್ ಚೇಳಾಯರು ನಿವಾಸಿ ಸುಂದರ ಪೂಜಾರಿ(60) ಎಂದು ಹೆಸರಿಸಲಾಗಿದೆ.
ಘಟನೆ ಅಕ್ಟೋಬರ್ ತಿಂಗಳಲ್ಲಿ ನಡೆದಿದ್ದು ಮಾನಸಿಕ ಖಿನ್ನತೆಗೊಳಗಾಗಿದ್ದ ಬಾಲಕಿ ವೈದ್ಯರಲ್ಲಿ ತನ್ನ ಮೇಲಾದ ಲೈಂಗಿಕ ದೌರ್ಜನ್ಯ ವಿವರಿಸಿದ್ದು ಈ ಹಿನ್ನೆಲೆಯಲ್ಲಿ ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.
ಬಾಲಕಿ ಹೊಸಬೆಟ್ಟುವಿನಲ್ಲಿ ಟ್ಯೂಶನ್ ಮುಗಿಸಿ ಬಸ್‌ನಲ್ಲಿ ಬಂದು ಮುಕ್ಕ‌ದಲ್ಲಿ ಇಳಿದು ತನ್ನ ಮನೆಗೆ ಒಳ ರಸ್ತೆಯಾಗಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸುಂದರ ಪೂಜಾರಿ ಎದುರು ಬದಿಯಿಂದ ಬಂದು ಆಕೆಯ ಕೈಹಿಡಿದು ಎಳೆದು ಎದೆಗೆ ಕೈ ಹಾಕಿ ಲೈಂಗಿಕ‌ ಕಿರುಕುಳ ನೀಡಿದ್ದಾನೆ ಎಂದು ಬಾಲಕಿ ಸುರತ್ಕಲ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

error: Content is protected !!