ಪಾವಂಜೆಯಲ್ಲಿ ವಧು-ವರರ ನೋಂದಣಿ ಮತ್ತು ಅನ್ವೇಷಣೆ ಕಾರ್ಯಕ್ರಮ ಯಶಸ್ವಿ

ಪಾವಂಜೆ: ದೇವಾಡಿಗ ಸಮಾಜ ಸೇವಾ ಸಂಘ (ರಿ) ಪಾವಂಜೆ, ಮಹಿಳಾ ವೇದಿಕೆ, ಯುವ ವೇದಿಕೆ, ದೇವಾಡಿಗ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ನಡೆದ ವಧು-ವರರ ನೋಂದಣಿ ಮತ್ತು ಅನ್ವೇಷಣೆ ಕಾರ್ಯಕ್ರಮ ದೇವಾಡಿಗ ವಧು ವರರ ವೇದಿಕೆ ಇದರ ಸಹಯೋಗದಲ್ಲಿ ಸಂಘದ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮೂಲಕ ಸಂಘದ ಹಿರಿಯ ದಂಪತಿಗಳು ಹಾಗೂ ಕಟ್ಟಡ ಸಮಿತಿಯ ಅಧ್ಯಕ್ಷರು ಆದ ಶ್ರೀಮತಿ ರಮಾ ದೇವಿ ಮತ್ತು ಶ್ರೀ ಪರಮೇಶ್ವರ್ ಪಿ. ಉದ್ಘಾಟನೆ ಮಾಡಿದರು. ಸಂಘದ ಅಧ್ಯಕ್ಷ ಶ್ರೀ ಅಣ್ಣಪ್ಪ ದೇವಾಡಿಗ ಪಕ್ಷಿಕೆರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.

✅Business Offer✅: TUZHAR ಸುಗಂಧ ದ್ರವ್ಯದೊಂದಿಗೆ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. 💰ಕಡಿಮೆ ಹೂಡಿಕೆ, 📦ಕಚ್ಛಾವಸ್ತು ಪೂರೈಕೆ, 📈 ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಜೊತೆ ನಿಮ್ಮ ಸ್ವಂತ ವ್ಯವಹಾರ ಪ್ರಾರಂಭಿಸಿ. 📲 +918088947906 🌐 www.tuzharperfumes.com

ಕಾರ್ಯಕ್ರಮದಲ್ಲಿ ಸುಮಾರು 100 ಕ್ಕಿಂತಲೂ ಅಧಿಕ ಹುಡುಗರು ಹಾಗೂ 25 ಕ್ಕಿಂತಲೂ ಹೆಚ್ಚಿನ ಹುಡುಗಿಯರು ಮತ್ತು ಅವರ ಹೆತ್ತವರು ಭಾಗವಹಿಸಿದ್ದರು. ವಧು, ವರರ ಹೊಂದಾಣಿಕೆ ಕಾರ್ಯದಲ್ಲಿ ಹಿರಿಯ ಸದಸ್ಯರು ಜೊತೆ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ರವಿ ಎಸ್. ದೇವಾಡಿಗ ಅಧ್ಯಕ್ಷರು ದೇವಾಡಿಗ ಸಂಘ(ರಿ)ಮುಂಬೈ, ಶ್ರೀ ಅಶೋಕ್ ಎ ದೇವಾಡಿಗ ಅಧ್ಯಕ್ಷರು ಕರ್ನಾಟಕ ರಾಜ್ಯ ದೇವಾಡಿಗ ಸಂಘ (ರಿ)ಮಂಗಳೂರು, ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಯಾದವ ದೇವಾಡಿಗ, ಮಹಿಳಾ ವೇದಿಕೆ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಜನಾರ್ದನ, ಟ್ರಸ್ಟ್ ಅಧ್ಯಕ್ಷ ಶ್ರೀ ರಮೇಶ್ ಕುಮಾರ್ ತೋಕೂರು, ಯುವ ವೇದಿಕೆ ಅಧ್ಯಕ್ಷ ಶ್ರೀ ಗಣೇಶ್ ದೇವಾಡಿಗ ಪಂಜ,ದೇವಾಡಿಗ ವಧು ವರರ ವೇದಿಕೆಯ ಸದಸ್ಯರಾದ ಶ್ರೀ ಜೀವನ್ ಪ್ರಕಾಶ್, ಶ್ರೀ ಅಶೋಕ್ ಪಾವಂಜೆ, ಶ್ರೀಮತಿ ಶೋಭಾ ಸೋಮನಾಥ್, ಶ್ರೀಮತಿ ಶೈಲಜಾ ವಾಮನ್, ಶ್ರೀಮತಿ ವೈಶಾಲಿ ಆನಂದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭ ದಲ್ಲಿ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ರಾಮದಾಸ ಪಾವಂಜೆ ಇವರು ಸ್ವಾಗತಿಸಿ, ಪ್ರಸ್ತಾವಿಕ ಮಾತುಗಳೊಂದಿಗೆ ಕೊನೆಯಲ್ಲಿ ಧನ್ಯವಾದಗಳನ್ನು ಸಮರ್ಪಿಸಿದರು.

error: Content is protected !!