ಕುಷ್ಟಗಿ: ಪಟ್ಟಣದ ಬಸವೇಶ್ವರ ವೃತ್ತದ ಶ್ರೀ ಕೃಷ್ಣಾ ಹೋಟೆಲ್ ನಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕನೋರ್ವ ನೇಣಿಗೆ ಶರಣಾದ ಘಟನೆ ಇಂದು ಬೆಳಕಿಗೆ ಬಂದಿದೆ.

ಕೊಪ್ಪಳ ತಾಲೂಕಿನ ಚಿಕ್ಕಬೊಮ್ಮನಾಳ ನಿವಾಸಿ ಮುತ್ತಪ್ಪ ಶಿವಪ್ಪ ಈಳಗೇರ (26) ನೇಣಿಗೆ ಶರಣಾದ ವ್ಯಕ್ತಿ.
ಕೃಷ್ಣಾ ಹೋಟಲ್ ನಲ್ಲಿ ಕಳೆದ ಏಳೆಂಟು ವರ್ಷಗಳಿಂದ ಮಾವನೊಂದಿಗೆ ಕೆಲಸ ನಿರ್ವಹಿಸುತ್ತಿದ್ದ. ಸದರಿ ಹೋಟೆಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮುತ್ತಪ್ಪ ಹಾಗೂ ಮಾವ ಮಂಜುನಾಥ ಸೇರಿದಂತೆ ಮೂವರು ಕಾರ್ಮಿಕರು ಎಂದಿನಂತೆ ಮಲಗಿದ್ದರು. ಈ ವೇಳೆ ಮುತ್ತಪ್ಪ ನಿದ್ದೆ ಬಾರದೇ ಚಡಪಡಿಸುತ್ತಿದ್ದ ಎನ್ನಲಾಗಿದ್ದು ಮಲಗಿದ್ದವ ಏಕಾಎಕಿ ಎದ್ದು ಬಂದು ಹೋಟಲ್‌ನಲ್ಲಿ ವಾಯರ್ ಹಗ್ಗದಿಂದ ನೇಣು ಹಾಕಿಕೊಂಡಿದ್ದಾನೆ.

ಪ್ರಕರಣದ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಪ್ರಕರಣ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.