ಪ್ರಧಾನಿ ಮೋದಿ ಹತ್ಯೆಗೆ ಸಿಐಎ ಸಂಚನ್ನು ವಿಫಲಗೊಳಿಸಿದ ಭಾರತ–ರಷ್ಯಾ ಜಂಟಿ ಕಾರ್ಯಾಚರಣೆ!  ಢಾಕಾದಲ್ಲಿ ಅಮೆರಿಕ ಅಧಿಕಾರಿಯ ನಿಗೂಢ ಸಾವಿಗೆ ಕಾರಣ ಏನು?

ಅಮೆರಿಕ ಮತ್ತು ಅದರ ಗುಪ್ತಚರ ಸಂಸ್ಥೆ ಸಿಐಎ (CIA) ಜಗತ್ತಿನಾದ್ಯಂತ ಹಲವು ವಿವಾದಾತ್ಮಕ ಕೃತ್ಯಗಳನ್ನು ನಡೆಸುವ ಮೂಲಕ ಕುಪ್ರಸಿದ್ಧವಾಗಿದೆ. ಒಂದು ದೇಶದ ಸರ್ಕಾರಗಳನ್ನು ಉರುಳಿಸುವುದು, ಅಶಾಂತಿ ಉಂಟುಮಾಡುವುದು, ತಮ್ಮ ಹಿತಾಸಕ್ತಿಗೆ ಅನುಕೂಲವಾಗುವ ರೀತಿಯಲ್ಲಿ ತಮಗೆ ಮಂಡಿಯೂರುವ ನಾಯಕನನ್ನು ಆಯ್ಕೆ ಮಾಡುವುದು ಇತ್ಯಾದಿ ಕೃತ್ಯಗಳಿಗೆ ಸಿಐಎ ಹೆಸರುವಾಸಿಯಾಗಿದೆ.

ದಕ್ಷಿಣ ಏಷ್ಯಾದಲ್ಲೂ ಅಮೆರಿಕಾದ ಹಸ್ತಕ್ಷೇಪ ಹೊಸದೇನಲ್ಲ. 1979ರಲ್ಲಿ ಅಫ್ಗಾನಿಸ್ತಾನದಲ್ಲಿ ಸೋವಿಯತ್ ಆಕ್ರಮಣದ ಕಾಲದಿಂದಲೇ ಅಮೆರಿಕಾ ಈ ಪ್ರದೇಶದಲ್ಲಿ ಕ್ರಿಯಾಶೀಲವಾಗಿದೆ. ಇತ್ತೀಚೆಗೆ ಬಾಂಗ್ಲಾದೇಶ ಮತ್ತು ನೇಪಾಳದಲ್ಲೂ ಆಡಳಿತ ಅಸ್ಥಿರತೆ ಉಂಟಾದ ಸಂದರ್ಭಗಳಲ್ಲಿ, ಸಿಐಎನ ಹಸ್ತವಿದೆ ಎಂಬ ಮಾತುಗಳು ಕೇಳಿಬಂದಿವೆ.

ಢಾಕಾದಲ್ಲಿ ಅಮೆರಿಕಾದ ಅಧಿಕಾರಿ ಸಾವಿನ ರಹಸ್ಯ
2025ರ ಆಗಸ್ಟ್ 31ರಂದು, ಬಾಂಗ್ಲಾದೇಶದ ಢಾಕಾದಲ್ಲಿರುವ ಒಂದು ಹೋಟೆಲ್‌ನಲ್ಲಿ ಅಮೆರಿಕಾದ ಸ್ಪೆಷಲ್ ಫೋರ್ಸ್ ಅಧಿಕಾರಿ ಟೆರನ್ಸ್ ಆರ್ವೆಲ್ ಜಾಕ್ಸನ್ ಎಂಬಾತ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ. ಈ ಘಟನೆಯ ಬಳಿಕ ದಕ್ಷಿಣ ಏಷ್ಯಾದಲ್ಲಿ ಅಮೆರಿಕಾದ ಗುಪ್ತಚರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಹೊಸ ಪ್ರಶ್ನೆಗಳು ಉದ್ಭವಿಸಿವೆ. ಆತ ಬಾಂಗ್ಲಾದೇಶದಲ್ಲಿ ಸೇನೆಗೆ ತರಬೇತಿ ನೀಡಲು ಬಂದಿದ್ದರು ಎಂಬ ವರದಿಗಳು ಇದ್ದರೂ, ಕೆಲವು ವಿಶ್ಲೇಷಕರು ಅವರು ಭಾರತ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ರಹಸ್ಯ ಕಾರ್ಯಾಚರಣೆ ನಡೆಸುತ್ತಿದ್ದನೆಂದು ಶಂಕಿಸಿದ್ದಾರೆ. ಆದರೆ, ಈ ಸಂಚು ಭಾರತ ಮತ್ತು ರಷ್ಯಾದ ಗುಪ್ತಚರ ಘಟಕಗಳ ಸಂಯುಕ್ತ ಕಾರ್ಯಾಚರಣೆಯಿಂದ ವಿಫಲವಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

 

✅Business Offer: TUZHAR ಮೂಲಕ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. ಕಡಿಮೆ ಹೂಡಿಕೆ, ಕಚ್ಛಾವಸ್ತು ಪೂರೈಕೆ, ಮಾರುಕಟ್ಟೆ ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಸುಗಂಧ ದ್ರವ್ಯ ವ್ಯಾಪಾರಿಗಳೊಂದಿಗೆ ಸುಗಂಧ ದ್ರವ್ಯ ವ್ಯವಹಾರ ಪ್ರಾರಂಭಿಸಿ ಸ್ವಾವಲಂಬಿಗಳಾಗಿ 📲 +918088947906

ಮೋದಿ–ಪುಟಿನ್ ಸಂಭಾಷಣೆ ಮತ್ತು ಶಂಕೆಗಳು
ಆ ದಿನ, ಅಂದರೆ ಆಗಸ್ಟ್ 31ರಂದು, ಪ್ರಧಾನಮಂತ್ರಿ ಮೋದಿ ಚೀನಾದ ಟಿಯಾಂಜಿನ್ ನಗರದಲ್ಲಿ SCO ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದರು. ಸಭೆಯ ನಂತರ, ಅವರು ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಾರಿನೊಳಗೆ ಸುಮಾರು 45 ನಿಮಿಷಗಳ ಕಾಲ ಖಾಸಗಿಯಾಗಿ ಮಾತುಕತೆ ನಡೆಸಿದರು. ಮಾಧ್ಯಮಗಳು ಈ ಸಭೆಯನ್ನು ವ್ಯಾಪಕವಾಗಿ ವರದಿ ಮಾಡಿದ್ದವು. ಇದೀಗ ಅನೇಕ ವಿಶ್ಲೇಷಕರ ಪ್ರಕಾರ ಹತ್ಯಾ ಸಂಚಿನ ಮಾತುಕತೆ ಇದಾಗಿರಬಹುದೆಂದು ಅನುಮಾನಿಸಿದ್ದಾರೆ.

ಮೋದಿ ಅವರ ನಿಗೂಢ ಹೇಳಿಕೆ
ಸೆಪ್ಟೆಂಬರ್ 2ರಂದು, ಮೋದಿ ನವದೆಹಲಿಯಲ್ಲಿ ನಡೆದ ಸೆಮಿಕಾನ್ ಶೃಂಗಸಭೆಯಲ್ಲಿ ನೀಡಿದ ಭಾಷಣದಲ್ಲಿ ಹಾಸ್ಯಮಿಶ್ರಿತವಾಗಿ “ನಾನು ಚೀನಾಕ್ಕೆ ಹೋಗಿರುವುದಕ್ಕೆ ನೀವು ಚಪ್ಪಾಳೆ ತಟ್ಟುತ್ತಿದ್ದೀರಾ? ಅಥವಾ ಚೀನಾದಿಂದ ಹಿಂತಿರುಗಿದ್ದಕ್ಕೆ ಚಪ್ಪಾಳೆ ತಟ್ಟುತ್ತೀರಾ? ಎಂದು ಪ್ರಶ್ನಿಸಿದ್ದರು. ಈ ಮಾತುಗಳು ಕೇವಲ ಹಾಸ್ಯವಲ್ಲ, ಅವರ ಜೀವಕ್ಕೆ ಅಪಾಯ ಇತ್ತು ಮತ್ತು ಅವರು ಸುರಕ್ಷಿತವಾಗಿ ಹಿಂದಿರುಗಿದರು ಎಂಬ ಸಂಕೇತವಿರಬಹುದು ಎಂದು ಅನೇಕ ವಿಶ್ಲೇಷಕರು ಭಾವಿಸಿದ್ದಾರೆ.

ನವಭಾರತವನ್ನು ಅಸ್ಥಿರಗೊಳಿಸುವುದೇ ಅಮೆರಿಕಾ ಉದ್ದೇಶವೇ?
ಭಾರತದಲ್ಲಿ ಬಲಿಷ್ಠ ಮತ್ತು ರಾಷ್ಟ್ರಪ್ರೇಮಿ ಸರ್ಕಾರ ಇರುವುದರಿಂದ, ಅಮೆರಿಕಾದಂತಹ ದೇಶಗಳಿಗೆ ಇದು ಅಸಹ್ಯವಾಗಿದೆ ಎಂಬ ವಿಶ್ಲೇಷಣೆಗಳಿವೆ. ಸಿಐಎ ಹಲವಾರು ವರ್ಷಗಳಿಂದ ಭಾರತವನ್ನು ಒಳಗೂ ಹೊರಗೂ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತದೆ. ಭಾರತವು ಯಾವುದೇ ಬಾಹ್ಯ ಒತ್ತಡಕ್ಕೆ ಮಣಿಯದ ಸರ್ಕಾರವನ್ನು ಹೊಂದಿದೆ. ಇಂಧನ ಭದ್ರತೆಗಾಗಿ ರಷ್ಯಾದಿಂದ ತೈಲ ಖರೀದಿಸುವುದು, ಅಮೆರಿಕಾದ ಒತ್ತಡವಿದ್ದರೂ ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡುವುದು – ಇವುಗಳೆಲ್ಲ “ನವಭಾರತ”ದ ದೃಢ ನಿಲುವು ಆಗಿರುವುದರಿಂದ ಅಮೆರಿಕಾಕ್ಕೆ ಇದು ಸಹಿಸಲಾಗದು. ಚೀನಾ ಹಾಗೂ ಭಾರತದ ನಡುವೆ ಕದನ ಏರ್ಪಡುವಂತೆ ಮಾಡಿ ಎರಡೂ ದೇಶವನ್ನು ಶಾಶ್ವತ ಶತ್ರುಗಳನ್ನಾಗಿಸುವ ಸಂಚು ಎನ್ನುವುದು ವಿಶ್ಲೇಷಿಸಲಾಗುತ್ತಿದೆ.

ವಿಶ್ಲೇಷಕರ ಪ್ರಕಾರ, ಭಾರತದ ವೇಗದ ಬೆಳವಣಿಗೆಯನ್ನು ತಡೆಯಲು ಮತ್ತು ಅದರ ಪ್ರಭಾವವನ್ನು ಕುಗ್ಗಿಸಲು ಕೆಲವು ವಿದೇಶಿ ರಾಷ್ಟ್ರಗಳು ಸಂಚು ರೂಪಿಸಬಹುದು. ಪ್ರಧಾನಮಂತ್ರಿ ಮೋದಿ ಅವರನ್ನು ಗುರಿಯಾಗಿಸುವುದೂ ಅದರ ಭಾಗವಾಗಿರಬಹುದು.

error: Content is protected !!