ಗಗನಕ್ಕೇರಿದ ಚಿನ್ನದ ಬೆಲೆ ದಿಢೀರ್‌ ₹50 ಸಾವಿರ ಕುಸಿತ?

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಏರಿಕೆಯಿಂದ ಜನಸಾಮಾನ್ಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಒಂದೇ ದಿನದಲ್ಲಿ ಸಾವಿರಾರು ರೂಪಾಯಿ ಏರಿಕೆಯಾಗುತ್ತಾ ಬಂದಿರುವ ಚಿನ್ನದ ದರ ಇದೀಗ 10 ಗ್ರಾಂಗೆ ₹1,40,000 ಗಡಿಯನ್ನು ಮುಟ್ಟಿದೆ. ಈ ಬೆಳವಣಿಗೆಯಿಂದ ಮಧ್ಯಮ ವರ್ಗ ಹಾಗೂ ಬಡ ವರ್ಗದವರು ಚಿನ್ನ ಖರೀದಿ ಮಾಡುವುದು ದೂರದ ಕನಸಾಗಿ ಮಾರ್ಪಟ್ಟಿದೆ.

ದೀಪಾವಳಿ ಹಬ್ಬದ ಸನ್ನಿಹಿತದಲ್ಲಿ ಲಕ್ಷ್ಮೀಪೂಜೆಗೆ ಚಿನ್ನ ಖರೀದಿ ಮಾಡುವ ಉತ್ಸಾಹದಲ್ಲಿದ್ದ ಜನರಿಗೆ ಈ ಬೆಲೆ ಏರಿಕೆ ದೊಡ್ಡ ಆಘಾತ ತಂದಿದೆ. ಆದರೆ ಈ ಆತಂಕದ ನಡುವೆ ಇದೀಗ ಚಿನ್ನಾಭರಣ ಪ್ರಿಯರಿಗೆ ಸ್ವಲ್ಪ ನೆಮ್ಮದಿ ನೀಡುವ ಸುದ್ದಿ ಹರಿದಾಡುತ್ತಿದೆ — ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ದಿಢೀರ್ ಕುಸಿಯುವ ಸಾಧ್ಯತೆ ಇದೆ ಎಂಬುದು ವಲಯದ ಸುದ್ದಿ.

ಆರ್ಥಿಕ ತಜ್ಞರ ಪ್ರಕಾರ, ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ನಿಧಾನವಾಗಿ ಕಡಿಮೆಯಾಗುತ್ತಿದ್ದು, ಹಬ್ಬದ ನಂತರ ಖರೀದಿಯ ಒತ್ತಡ ತಗ್ಗಿದ ಹಿನ್ನೆಲೆಯಲ್ಲಿ ದರ ಇಳಿಕೆಯ ನಿರೀಕ್ಷೆ ವ್ಯಕ್ತವಾಗಿದೆ. ಕೆಲವು ವರದಿಗಳ ಪ್ರಕಾರ ಚಿನ್ನದ ಬೆಲೆ ₹90,000 ಗಡಿಗೆ ಇಳಿಯುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಇದಕ್ಕೂ ಮೀರಿಸಿ, ಚಿನ್ನದ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಪೂರ್ಣವಾಗಿ ತೆಗೆದುಹಾಕಬೇಕು ಎಂಬ ಒತ್ತಾಯ ವ್ಯಾಪಾರ ವಲಯದಿಂದ ಕೇಳಿಬಂದಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡರೆ, ಚಿನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿಯುವುದು ಖಚಿತ ಎಂದು ತಜ್ಞರು ಹೇಳಿದ್ದಾರೆ.

ದೀಪಾವಳಿ ಬಳಿಕ ಮಾರುಕಟ್ಟೆ ಚಟುವಟಿಕೆ ನಿಧಾನಗತಿಯಲ್ಲಿದ್ದು, ಬೆಲೆ ಇಳಿಕೆ ಪ್ರಾರಂಭವಾಗುವ ಲಕ್ಷಣಗಳು ಈಗಾಗಲೇ ಗೋಚರಿಸುತ್ತಿವೆ. ಆದರೆ, ಈ ಕುರಿತಂತೆ ಯಾವುದೇ ಅಧಿಕೃತ ಪ್ರಕಟಣೆ ಅಥವಾ ಸರ್ಕಾರದ ನಿರ್ಧಾರ ಇನ್ನಷ್ಟೇ ಹೊರಬರಬೇಕಿದೆ.

ಚಿನ್ನದ ಮಾರುಕಟ್ಟೆಯ ಈ ತೀವ್ರ ಚಲನವಲನದ ನಡುವೆ ಗ್ರಾಹಕರು ಬೆಲೆ ಇಳಿಕೆಗೆ ಕಾಯುತ್ತಿದ್ದು, ವ್ಯಾಪಾರಿಗಳು ಕೂಡ ಮುಂದಿನ ಕೆಲವು ದಿನಗಳ ಸ್ಥಿತಿಗತಿಯನ್ನು ಗಮನಿಸುತ್ತಿದ್ದಾರೆ. ಯಾವಾಗಲಾದರೂ ದರದಲ್ಲಿ ದೊಡ್ಡ ಮಟ್ಟದ ಬದಲಾವಣೆ ಸಂಭವಿಸಬಹುದು ಎಂದು ವಲಯದ ಮೂಲಗಳು ಹೇಳಿವೆ.

 

✅Business Offer: TUZHAR ಮೂಲಕ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. ಕಡಿಮೆ ಹೂಡಿಕೆ, ಕಚ್ಛಾವಸ್ತು ಪೂರೈಕೆ, ಮಾರುಕಟ್ಟೆ ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಸುಗಂಧ ದ್ರವ್ಯ ವ್ಯಾಪಾರಿಗಳೊಂದಿಗೆ ಸುಗಂಧ ದ್ರವ್ಯ ವ್ಯವಹಾರ ಪ್ರಾರಂಭಿಸಿ ಸ್ವಾವಲಂಬಿಗಳಾಗಿ 📲 +918088947906

error: Content is protected !!