ಸುರತ್ಕಲ್: ಮನೆಗಳಿಗೆ ಬಡಿದ ಸಿಡಿಲು, 6 ಮಂದಿ ಆಸ್ಪತ್ರೆಗೆ ದಾಖಲು!

ಸುರತ್ಕಲ್‌: ಆದಿತ್ಯವಾರ ಸಂಜೆ ಇಲ್ಲಿನ ಮಧ್ಯ ಗುರುನಗರ ಎಂಬಲ್ಲಿ ಎರಡು ಮನೆಗಳಿಗೆ ಸಿಡಿಲು ಬಡಿದ ಪರಿಣಾಮ ಅರು ಮಂದಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಭಾರತಿ, ವಿನಯ, ಕುಸುಮ, ಹರಿಯಪ್ಪ, ರವಿಕಲಾ, ನಿತೀಶ್ ಎಂಬವರು ಸಿಡಿಲಿನ ಹೊಡೆತದಿಂದ ಗಾಯಗೊಂಡಿದ್ದು ಅವರನ್ನು ಕಾನದ ಮಿಸ್ಕಿತ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ‌ಕೊಡಿಸಲಾಗಿದೆ‌.
ಹರಿಯಪ್ಪ ಮತ್ತು ರವಿಕಲಾ ಎಂಬವರ‌ ಮನೆಯ ಎಲ್ಲಾ ಸ್ವಿಚ್‌ಬೋರ್ಡ್ ಗಳು ಸುಟ್ಟು ಕರಕಲಾಗಿದ್ದು, ಮನೆಯ ನೆಲ, ಗೋಡೆ ಮತ್ತು ಮೇಲ್ಛಾವಣಿಗೆ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ.

error: Content is protected !!