ಮತಗಳ್ಳತನ ವಿರುದ್ಧ ಸಹಿ ಸಂಗ್ರಹ ಅಭಿಯಾನ: ಐವನ್ ಡಿಸೋಜ

ಮಂಗಳೂರು: ಮತಗಳ್ಳತನ ವಿರುದ್ಧ ರಾಹುಲ್ ಗಾಂಧಿಯವರ ಅಭಿಯಾನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಿ ಸಂಗ್ರಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಈ ಅಭಿಯಾನವನ್ನು ಜಿಲ್ಲೆಯ 1,862 ಮತದಾನ ಕೇಂದ್ರಗಳಲ್ಲಿ ನಡೆಸಲಾಗುವುದು ಮತ್ತು ಕನಿಷ್ಠ 18,000 ಸಹಿಗಳನ್ನು ಸಂಗ್ರಹಿಸಲು ಗುರಿ ಹೊಂದಿದ್ದ ತಿಳಿಸಿದರು. ಜೂನ್ 13 ಮತ್ತು 14ರಂದು ಮಂಗಳೂರು ನಗರದ ಉರ್ವಾಸ್ಟೋರ್, ಕುದ್ರೋಳಿ, ಶಕ್ತಿನಗರ, ಬಿಕರ್ನಕಟ್ಟೆ ಮತ್ತು ಕದ್ರಿ ಮಾರುಕಟ್ಟೆ ಸೇರಿದಂತೆ ಹಲವೆಡೆ ಸಹಿ ಸಂಗ್ರಹ ಕಾರ್ಯಕ್ರಮಗಳು ಜರುಗಲಿವೆ.

ಇದೇ ಸಂದರ್ಭದಲ್ಲಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ಸಮೀಕ್ಷೆ ಕುರಿತು ಡಿಸೋಜಾ ಅವರು ಮಾಹಿತಿ ನೀಡಿದರು. ಸುಳ್ಯ, ಪುತ್ತೂರು, ಕಡಬ ಮತ್ತು ಮೂಡುಬಿದಿರೆ ತಾಲೂಕುಗಳಲ್ಲಿ ಶೇಕಡಾ 100 ಸಮೀಕ್ಷೆ ಪೂರ್ಣಗೊಂಡಿದೆಯೆಂದು ಹೇಳಿದ ಅವರು, ಮಂಗಳೂರು ನಗರದ ಸಮೀಕ್ಷೆ ಹಿಂದುಳಿದಿರುವುದಕ್ಕೆ ವಿದೇಶ ನಿವಾಸ, ಪಿಜಿ ವಾಸ ಮತ್ತು ಹೊರಜಿಲ್ಲೆಯ ನಿವಾಸಿಗಳು ಕಾರಣ ಎಂದರು. ಎಲ್ಲರ ಜೀವನಮಟ್ಟ ಅರ್ಥಮಾಡಿಕೊಳ್ಳಲು ಈ ಸಮೀಕ್ಷೆ ಅಗತ್ಯವೆಂದು ಒತ್ತಿಹೇಳಿದ ಅವರು, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ಸಹಕರಿಸಬೇಕೆಂದು ಕೋರಿದರು.

ಈ ಸುದ್ದಿಗೋಷ್ಠಿಯಲ್ಲಿ ಶಶಿಧರ ಹೆಗ್ಡೆ, ಪ್ರಕಾಶ್ ಸಾಲ್ಯಾನ್, ನಾಗೇಂದ್ರ ಕುಮಾರ್, ಸತೀಶ್ ಪೆಂಗಲ್, ಭಾಸ್ಕರ್, ಪ್ರೇಮ್ ಬಲ್ಲಾಳ್ ಬಾಗ್, ಮೀನಾ ಟೆಲ್ಲಿಸ್, ಚಂದ್ರಹಾಸ, ಇಮ್ರಾನ್, ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.

error: Content is protected !!