ಮಂಗಳೂರು: ಮುಂಬಯಿ ಕುಲಾಲ ಸಂಘ ಮುಂಬಯಿಯ ಮಂಗಳೂರಿನ ಯೋಜನೆಯಾದ ಕುಲಾಲ ಭವನ ಮಂಗಳೂರು ಲೋಕಾರ್ಪಣೆಯ ಆಮಂತ್ರಣ ಪತ್ರಿಕೆಯು ಪವಿತ್ರವಾದ ಶ್ರೀಕೃಷ್ಣನ ಸನ್ನಿದಿಯಾದ ಪೇಜಾವರ ಮಠದಲ್ಲಿ ಬಿಡುಗಡೆಗೊಳ್ಳುದರೊಂದಿಗೆ ಭಗವಂತನ ಆಶೀರ್ವಾದದಿಂದ ಮುಂದಿನ ಎಲ್ಲಾ ಕಾರ್ಯಗಳು ಸುಗಮವಾಗಿ ಸಾಗುವುದು. ಶತಮಾನದತ್ತ ಮುನ್ನಡೆಯುತ್ತಿರುವ ಕುಲಾಲ ಸಂಘ ಮುಂಬಯಿ ಇದೀಗ ಮಂಗಳೂರಲ್ಲಿ ಕುಲಾಲ ಭವನವನ್ನು ಲೋಕಾರ್ಪಣೆ ಮಾಡುತ್ತಿದ್ದು ಸಂಘದ ಮುಂದಿನ ಯೋಜನೆಯು ಸಮಾಜದ ಮಕ್ಕಳನ್ನು ಉತ್ತಮ ಶಿಕ್ಷಣದ ಮೂಲಕ ದೇಶದ ಉತ್ತಮ ನಾಗರಿಕರನ್ನಾಗಿ ಮಾಡಲು ಸಂಘದ್ದೇ ಆದ ಶಿಕ್ಷಣ ಸಂಸ್ಥೆ ಸ್ಥಾಪನೆಯಾಗಲಿ ಭವನ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಲಿಎಂದು ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಸಿ.ಎಂ.ಡಿ. ಹಾಗೂ ಬಂಟರ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿಯವರು ಶುಭ ಹಾರೈಸಿದರು.
ನ.23 ರಂದು ನಡೆಯಲಿರುವ ಮಂಗಳೂರಿನ ಮಂಗಳಾದೇವಿ ಸಮೀಪದ ಕುಲಾಲ ಭವನ ಮಂಗಳೂರು ಇದರ ಲೋಕಾರ್ಪಣೆ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಅ. 5 ರಂದು ಸಂತಾಕ್ರೂಸ್ ಪೂರ್ವ ಪ್ರಭಾತ್ ಕಾಲೋನಿಯ ಪೇಜಾವರ ಮಠದಲ್ಲಿ ಕುಲಾಲ ಸಂಘ ಮುಂಬಯಿ ಅಧ್ಯಕ್ಷರಾದ ರಘು ಮೂಲ್ಯ ಪಾದಬೆಟ್ಟು ಇವರ ಅಧ್ಯಕ್ಷತೆಯಲ್ಲಿ ನಡೆದಿದ್ದು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಕುಲಾಲ ಭವನ ಮಂಗಳೂರು ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ, ಜೀವ ವಿಮಾ ಕ್ಷೇತ್ರದಲ್ಲಿ ತಾನು ಮಾಡಿದ ಸಾಧನೆ ಗಿನ್ನೆಸ್ ಬುಕ್ಸ್ ಆಫ್ ರೆಕಾರ್ಡ್ ಸೇರಿದ್ದ ಸಂದರ್ಭದಲ್ಲಿ ಕುಲಾಲ ಸಂಘ ಮುಂಬಯಿಯ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಡಾ. ಆರ್. ಕೆ. ಶೆಟ್ಟಿ ಯವರು ಸಂಘ ಸಂಸ್ಥೆಗಳಲ್ಲಿ ಒಳಗಿದ್ದು ಕಾರ್ಯ ನಿರ್ವಹಿಸಿದಾಗ ಅದರ ಮಹತ್ವ ತಿಳಿಯುತ್ತಿದೆ. ಜಾತೀಯ ಸಂಘಟನೆಗಳ ಸಹಾಯ ಪಡೆದ ಅನೇಕರು ಇಂದು ಉನ್ನತ ಮಟ್ಟಕ್ಕೇರಿದ್ದು ಬಂಟರ ಸಂಘದಲ್ಲಿ ಅನೇಕ ಉದಾಹರಣೆಗಳಿವೆ. ಎಲ್ಲರೂ ಒಟ್ಟಾಗಿ ಇಂತಹ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಬೇಕು. ಉನ್ನತ ಶಿಕ್ಷಣ ಪಡೆದು ತನ್ನ ಶಿಕ್ಷಣಕ್ಕೆ ತಕ್ಕಂತೆ ಕೆಲಸ ಸಿಗದಂತಹ ಯುವ ಜನಾಂಗಕ್ಕೆ ತರಬೇತಿಯನ್ನು ನೀಡಲು ಈಗಾಗಲೇ ಬಂಟರ ಸಂಘದಲ್ಲಿ ಸೌಕರ್ಯವನ್ನು ಪ್ರಾರಂಭಿಸಿದ್ದು ಕುಲಾಲ ಸಮಾಜದ ಅರ್ಹ ಯುವ ಜನಾಂಗವು ಇದರ ಪ್ರಯೋಜನ ಪಡೆಯದಿದ್ದರೆ ಅದಕ್ಕೆ ನನ್ನ ಪ್ರೋತ್ಸಾಹ ಇದೆ ಎಂದರು.
ಆಶೀರ್ವಚನ ನೀಡಿದ ಸಂತಾಕ್ರೂಸ್ ಮಂತ್ರದೇವತೆ ಚಾರಿಟೇಬಲ್ ಟ್ರಸ್ಠ್ ನ ಆಡಳಿತ ಮೊಕ್ತೇಸರ ವಾಸುದೇವ ಕೆ. ಬಂಜನ್ ಅವರು ಕುಲಾಲ ಭವನ ಮಂಗಳೂರು ನಮ್ಮ ಕಾಲದಲ್ಲೆ ಲೋಕಾರ್ಪಣೆಗೊಳ್ಳುತಿರುವುದು ನಮ್ಮ ಸೌಭಾಗ್ಯ. ಭವನ ಭಗವಂತನ ವನವಾಗಿದ್ದು ಬೃಂದಾವನವಾಗಲಿ. ಹಂತ ಹಂತವಾಗಿ ಹೆಮ್ಮರವಾಗಲಿ. ಹನಿ ಕೂಡಿ ಹಳ್ಳ ಎಂಬಂತೆ ಎಲ್ಲರೂ ಕೂಡಿ ಸಹಕರಿಸುತ್ತಾ ಈ ರಥವನ್ನು ಮುಂದಕ್ಕೆ ಸಾಗಿಸೋಣ. ಮುಂದಿನ ಪೀಳಿಗೆಗೆ ಇದು ಪ್ರಯೋಜನಕಾರಿಯಾಗಲಿ ಎಂದು ಶುಭ ಹಾರೈಸಿದರು.
ಕಟ್ಟಡದ ಸಮಿತಿಯ ಕಾರ್ಯಧ್ಯಕ್ಷ ಹಾಗೂ ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ ಸಾಲ್ಯಾನ್ ಬಂಟ್ವಾಳ ಮಾತನಾಡಿ ನ. 23ರಂದು ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಮುಂಬೈಯಿಂದ ಸಾವಿರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಹೋಗಿ ಸಮಾರಂಭದಲ್ಲಿ ಭಾಗವಹಿಸುವಂತಾಗಬೇಕು ಎಂದು ವಿನಂತಿಸಿದರು.
ಕಟ್ಟಡದ ಸಮಿತಿಯ ಉಪ ಕಾರ್ಯಧ್ಯಕ್ಷ ಸುನಿಲ್ ಆರ್ ಸಾಲ್ಯಾನ್ ಮಾತನಾಡುತ್ತಾ ಸಮಾಜದ ಅಭಿವೃದ್ಧಿಗೆ ದಿ. ಪಿ ಕೆ ಸಾಲ್ಯಾನ್ ಮತ್ತು ಬಾಬು ಸಾಲಿಯಾನ್ ಅವರ ಕೊಡುಗೆ ಬಗ್ಗೆ ಮಾತನಾಡುತ್ತಾ ನಮ್ಮ ಸಮಾಜದಲ್ಲಿ ಮಯೂರ್ ಉಳ್ಳಾಲ್ ರವರಂತಹ ಸಮರ್ಥ ನಾಯಕತ್ವ ಬೇಕಾಗಿದೆ. ಅದರೊಂದಿಗೆ ಎಲ್ಲರೂ ಸಮಾಜದ ಅಭಿವೃದ್ಧಿಗಾಗಿ ಎಲ್ಲರೂ ಸಮಾನವಾಗಿ ಕೈಜೋಡಿಸುವ ಅಗತ್ಯವಿದೆ.ಸಮಜದ ಎಲ್ಲಾ ಉಪ ಬಳಿಯವರು ಹೆಸರು ಭವನದಲ್ಲಿ ಕಾಣುವಂತಾಗಬೇಕು ಅದಕ್ಕೆ ಬೇರೆ ಬೇರೆ ಬಳಿಯವರು ಸಹಕಾರ ನೀಡಬೇಕು ಎಂದರು
ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತ ಡಿ ಬಂಜನ್ ಮಾತನಾಡುತ್ತಾ ನವೆಂಬರ್ 23 ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ ಎಂದು ವಿನಂತಿಸಿದರು.
ವೇದಿಕೆಯಲ್ಲಿ ಉದ್ಯಮಿ ಜಗದೀಶ್ ಆರ್ ಬಂಜನ್ ಅಮರನಾಥ್, ಸಂಘದ ಉಪಾಧ್ಯಕ್ಷ ಡಿ ಐ ಮೂಲ್ಯ, ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಬಿ ಸಾಲ್ಯಾನ್, ಚರ್ಚ್ ಗೇಟ್ ದಹಿಸರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಆನಂದ್ ಕೆ ಕುಲಾಲ್, ಠಾಣೆ ಕಸಾರ ಕರ್ಜತ್ ಮತ್ತು ಭಿವಂಡಿ, ಠಾಣೆ ಕಸಾರ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮಣ್ ಸಿ ಮೂಲ್ಯ, ನವಿ ಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸದಾನಂದ ಎಸ್ ಕುಲಾಲ್, ಮಂಗಳೂರು ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್ ಬಂಗೇರ, ಸಿ ಎಸ್ ಟಿ ಮೂಲೂಂಡ್ ಮಾನ್ಕುರ್ಡ್ ಸಮಿತಿಯ ಕಾರ್ಯಾಧ್ಯಕ್ಷ ಉದಯ ಅತ್ತಾವರ್, ಮೀರಾ ರೋಡ್ ವಿರಾರ್ ಸ್ಥಳೀಯ ಸಮಿತಿಯ ಉಪಕಾರ್ಯಧ್ಯಕ್ಷ ಮೋಹನ್ ಬಂಜನ್, , ಅಮೂಲ್ಯ ಸಂಪಾದಕ ಆನಂದ ಬಿ ಮೂಲ್ಯ, .ಕುಲಾಲ ಭವನ ಉದ್ಘಾಟನಾ ಸಮಿತಿಯ ಕಾರ್ಯಧ್ಯಕ್ಷ ಬಿ ದಿನೇಶ್ ಕುಲಾಲ್ ಉಪಸ್ಥಿತರಿದ್ದರು.
ಕುಲಾಲ ಸಂಘ ಮುಂಬಯಿಯ ಗೌರವ ಅಧ್ಯಕ್ಷ ಪಿ. ದೇವದಾಸ್ ಎಲ್. ಕುಲಾಲ್ ಅವರು ಎಲ್ಲರನ್ನು ಸ್ವಾಗತಿಸಿ ಪ್ರಸ್ತಾವನೆ ನುಡಿಗಳನ್ನಾಡಿದರು. ಕಟ್ಟಡ ಸಮಿತಿಯ ಕಾರ್ಯದರ್ಶಿ ಉಮೇಶ್ ಎಂ.ಬಂಗೇರ ಮತ್ತು ಮಹಿಳಾ ವಿಭಾಗದ ಉಪ ಕಾರ್ಯಧ್ಯಕ್ಷೆ ಕವಿತಾ ಹಂಡ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಂಘದ ಗೌರವ ಕೋಶಾಧಿಕಾರಿ ಜಯ ಎಸ್ ಅಂಚನ್ ಅವರು ವಂದನಾರ್ಪಣೆ ಮಾಡಿದರು. ಪ್ರಾರ್ಥನೆಯನ್ನು ಪ್ರೇಮ ಮೂಲ್ಯ ಕಲ್ಯಾಣ್. ಮತ್ತು ಜಯಂತಿ ಬಂಗೇರ್ ಮೀರಾ ರೋಡ್ ಮಾಡಿದರು.
ಸಮಾರಂಭದಲ್ಲಿ ಸಂಘದ ಸ್ಥಳೀಯ ಸಮಿತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಕುಣಿತ ಭಜನೆ, ಮ್ಯಾಜಿಸಿಯನ್ ಕುಂದರ್ಸ್ ಮ್ಯಾಜಿಕ್ ಶೋ ಇವರಿಂದ ಮ್ಯಾಜಿಕ್ ಶೋ ನಡೆಯಿತು.