ಮಂಗಳೂರು: ಜೀ ಕನ್ನಡದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಮತ್ತು ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮಗಳಿಗೆ ಮಂಗಳೂರಿನಲ್ಲಿ ಮಹಾ ಆಡಿಷನ್ ಸೆಪ್ಟೆಂಬರ್ 15ರಂದು ಬೆಳಗ್ಗೆ 9 ಗಂಟೆಗೆ ಕೊಡಿಯಾಲಬೈಲ್ ನಗರದ ಶಾರದ ವಿದ್ಯಾಲಯದಲ್ಲಿ ಈ ಆಡಿಷನ್ ಆಯೋಜಿಸಲಾಗಿದೆ.
ಪ್ರತಿಭಾನ್ವಿತ ಕಲಾವಿದರಿಗಾಗಿ ನಂ.1 ಚಾನೆಲ್ ಆದ ಜೀ ಕನ್ನಡ ವಾಹಿನಿ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಭಾಗವಹಿಸುವವರು 6 ರಿಂದ 6೦ ವರ್ಷ ವಯೋಮಿತಿಯವರಾಗಿದ್ದು, ನೃತ್ಯ ಪ್ರತಿಭೆಯನ್ನು ಹೊಂದಿರಬೇಕು ಮತ್ತು ಕಾಮಿಡಿ ಕಿಲಾಡಿಗಳಲ್ಲಿ ಭಾಗವಹಿಸುವವರು 16 ರಿಂದ 60 ವರುಷದ ಒಳಗಿರಬೇಕು ಹಾಗೂ ನಿಮ್ಮದೇ ಕಾಮಿಡಿ ಸ್ಕಿಟ್ ಹೊಂದಿರಬೇಕು.
ಆಡಿಷನ್ ಗೆ ಭಾಗವಹಿಸುವವರು ಪಾಸ್‌ಪೋರ್ಟ್ ಗಾತ್ರದ ಫೋಟೋ ಮತ್ತು ವಿಳಾಸ ಪುರಾವೆಯ ನಕಲು ತಂದಿರಬೇಕು. ಜೀ ಕನ್ನಡ ವಾಹಿನಿಯು ಈ ಆಡಿಷನ್ ಗಳಿಗೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ವಾಹಿನಿಯ ಹೆಸರಿನಲ್ಲಿ ಹಣ ಪಡೆಯುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಾಹಿನಿಯು ತಿಳಿಸಿದೆ.