ಮಹಿಳೆ ಆತ್ಮಹತ್ಯೆ ಪ್ರಕರಣ: ಆರೋಪಿಗೆ ನಿರೀಕ್ಷಣಾ ಜಾಮೀನು

ಮಂಗಳೂರು: ತೋಡಾರಿನ ವಿವಾಹಿತ ಮಹಿಳೆಯೊಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆಟೋ ರಿಕ್ಷಾ ಚಾಲಕರಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.


ಆಟೋ ರಿಕ್ಷಾ ಚಾಲಕ ಅಶ್ರಫ್ ಎಂಬಾತ ಮಹಿಳೆಯೊಬ್ಬರಿಂದ ನಗ ಮತ್ತು ನಗದು ಪಡೆದುಕೊಂಡಿದ್ದ. ಹಲವು ದಿನಗಳಾದರೂ ಇದನ್ನು ವಾಪಸ್ ನೀಡದೇ ಇದ್ದಾಗ, ಬೇಸತ್ತಕೊಂಡ ಮಹಿಳೆ ಮನೆಯಲ್ಲಿನ ಕೋಣೆಯೊಂದರಲ್ಲಿ ಕುತ್ತಿಗೆಗೆ ಬಟ್ಟೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ಪತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಮೂಡಬಿದಿರೆ ಪೊಲೀಸರು ಎಫ್.ಐ.ಆರ್. ದಾಖಲಿಸಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಆರೋಪಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಇದೀಗ ಆರೋಪಿ ಅಶ್ರಫ್ ಗೆ ಮಂಗಳೂರಿನ ಪ್ರಧಾನ ಸತ್ಯ ಮತ್ತು ಜಿಲ್ಲಾ ನ್ಯಾಯಾಲಯ ಷರತ್ತು ಬದ್ದ ಜಾಮೀನು ನೀಡಿರುತ್ತದೆ, ಆರೋಪಿ ಪರ ನ್ಯಾಯವಾದಿ ಇಸ್ಮಾಯಿಲ್ ಶಾಫಿ ಬೈಕಂಪಾಡಿ, ರಿಜ್ವಾನುಲ್ ಅನ್ಸಾರ್ ಮೂಡಬಿದಿರೆ ವಾದ ಮಂಡಿಸಿದ್ದರು.

error: Content is protected !!