ಪೆಟ್ರೋಲ್‌ ಬಂಕ್‌ನಲ್ಲಿ ಏಣಿಗೆ ಕಾರು ಢಿಕ್ಕಿ: ಕಾರ್ಮಿಕನಿಗೆ ಗಾಯ

ಉಪ್ಪಿನಂಗಡಿ: ಏಣಿ ಹತ್ತಿ ಪೈಂಟಿಂಗ್‌ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಏಣಿಗೆ ಕಾರು ಢಿಕ್ಕಿಯಾದ ಪರಿಣಾಮ ಕಾರ್ಮಿಕ ಕೆಳಕ್ಕೆ ಬಿದ್ದು ಗಾಯಗೊಂಡಿರುವ ಘಟನೆ ನೆಲ್ಯಾಡಿಯ ಎಚ್‌ಪಿ ಪೆಟ್ರೋಲ್‌ ಬಂಕ್‌ನಲ್ಲಿ ನಡೆದಿದೆ.

ಬಜತ್ತೂರು ನಿವಾಸಿ ಹರ್ಷಿತ್‌ ಕುಮಾರ್‌ (27) ಗಾಯಗೊಂಡವರು.

ಹರ್ಷಿತ್‌ ಕುಮಾರ್‌ ಹಾಗೂ ಚೇತನ್‌ ಎಂಬವರು ಪೆಟ್ರೋಲ್‌ ಬಂಕ್‌ನಲ್ಲಿ ಪೈಂಟಿಂಗ್‌ ಕೆಲಸ ಮಾಡುತ್ತಿದ್ದು, ಈ ಪೈಕಿ ಹರ್ಷಿತ್‌ ಕುಮಾರ್‌ ಏಣಿ ಹತ್ತಿ ಗೋಡೆಗೆ ಪೈಂಟಿಂಗ್‌ ಕೆಲಸ ಮಾಡುತ್ತಿದ್ದ ವೇಳೆ ಪೆಟ್ರೋಲ್‌ ಹಾಕಲು ಬಂದ ಕಾರು ಏಣಿಗೆ ಢಿಕ್ಕಿ ಹೊಡೆದಿದೆ.

error: Content is protected !!